ಪಾಕ್ ವಿರುದ್ಧದ ಪಂದ್ಯದಲ್ಲಿ ಇವರನ್ನು ಓಪನಿಂಗ್ ಕಳಿಸಬೇಡಿ! ಭಾರತ ತಂಡಕ್ಕೆ ಕಮ್ರಾನ್​ ಅಕ್ಮಲ್​ ಎಚ್ಚರಿಕೆ

2 Min Read
ಪಾಕ್ ವಿರುದ್ಧದ ಪಂದ್ಯದಲ್ಲಿ ಇವರನ್ನು ಓಪನಿಂಗ್ ಕಳಿಸಬೇಡಿ! ಭಾರತ ತಂಡಕ್ಕೆ ಕಮ್ರಾನ್​ ಅಕ್ಮಲ್​ ಎಚ್ಚರಿಕೆ

ಅಮೆರಿಕಾ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಈಗಾಗಲೇ ಅದ್ದೂರಿ ಚಾಲನೆ ದೊರಕಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಮಾತ್ರ ಜೂ.09ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದ ಮೇಲೆ ಮೂಡಿದೆ. ಪಂದ್ಯ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿರುವ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಖರೀದಿಸಿ, ಮ್ಯಾಚ್​ ಆರಂಭಕ್ಕಾಗಿ ಕ್ಷಣಗಣನೆ ಎಣಿಸುತ್ತಿದ್ದಾರೆ. ಈ ಮಧ್ಯೆ ಪಾಕ್​ನ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಮಾತನಾಡಿದ್ದು, ಟೀಂ ಇಂಡಿಯಾಗೆ ಬಹುಮುಖ್ಯ ಸಲಹೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ನಿರ್ಮಾಪಕ ರಾಮೋಜಿ ರಾವ್ ನಿಧನಕ್ಕೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ ಕಿಶನ್ ರೆಡ್ಡಿ ಸಂತಾಪ

ಜೂ. 9ರ ಭಾನುವಾರದಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್​ ಲೈನ್​ ಹೇಗಿದೆ? ಓಪನಿಂಗ್​ನಲ್ಲಿ ಯಾರು ಕಣಕ್ಕೆ ಇಳಿಯಬಾರದು? ಎಂಬುದರ ಬಗ್ಗೆ ಕಮ್ರಾನ್ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್​ಮನ್​ ಆದ ವಿರಾಟ್ ಕೊಹ್ಲಿ ಅವರನ್ನು ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಜತೆಗೆ ಕ್ರೀಸ್​ಗೆ ಕಳಿಸಬೇಡಿ. ಪ್ರಸ್ತುತ ಭಾರತ ತಂಡದ ಬ್ಯಾಟಿಂಗ್ ಲೈನ್​ಅಪ್ ಸರಿಯಿಲ್ಲ. ವಿರಾಟ್ ಓಪನಿಂಗ್ ಇಳಿಯುವುದು ನನಗೆ ಸರಿ ಕಾಣಿಸುತ್ತಿಲ್ಲ. ರೋಹಿತ್ ಮತ್ತು ಯಶಸ್ವಿ ಜೈಸ್ವಾಲ್ ಆರಂಭಿಕ ಬ್ಯಾಟ್ಸ್​ಮನ್​ಗಳಾಗಿ ತಂಡಕ್ಕೆ ಉತ್ತಮ ಸ್ಟಾರ್ಟ್​ ಕೊಡಬಲ್ಲರು. ಕೊಹ್ಲಿ ಓಪನರ್​ ಆಗಿ ಕಣಕ್ಕಿಳಿಯುವುದು ವ್ಯರ್ಥ ಎಂದಿದ್ದಾರೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಬಿಡುಗಡೆಗೆ ಸಿದ್ಧತೆ..ಯುದ್ಧಭೂಮಿಯಲ್ಲಿ ಅಶ್ವತ್ಥಾಮ!

See also  ಸೆಮಿಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೀನಾಯ ಸೋಲು: ನಾಯಕ ರೋಹಿತ್​ ಕೊಟ್ಟ ಕಾರಣ ಹೀಗಿದೆ…

“ವಿರಾಟ್​ ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಕೊಡುಗೆ ನೀಡುವುದೇ ಉತ್ತಮ. ಇದರಿಂದ ಮ್ಯಾಚ್ ಗೆಲ್ಲುವ ಅವಕಾಶಗಳೇ ಹೆಚ್ಚಿರುತ್ತದೆ. ಕೊಹ್ಲಿ ಅತ್ಯುತ್ತಮ ಫಿನಿಶರ್​ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಯಾಕಂದರೆ, ಅವರಿಗೆ ಒತ್ತಡ ನಿಭಾಯಿಸುವ ಸಾಮರ್ಥ್ಯವಿದ್ದು, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮುಂದಿನ ಪಂದ್ಯಗಳಲ್ಲಿ ರೋಹಿತ್ ಜತೆಗೆ ವಿರಾಟ್​ರನ್ನು ಓಪನಿಂಗ್ ಕಳಿಸಿದ್ದೇ ಆದರೆ, ಖಂಡಿತ ಟೀಂ ಇಂಡಿಯಾ ದೊಡ್ಡ ತಪ್ಪು ಮಾಡುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

ಜೀವನದಲ್ಲಿ ಇದೆಲ್ಲಾ… ಕಡೆಗೂ ಛೀಮಾರಿ, ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ ಉಪನಾಯಕ ಹಾರ್ದಿಕ್ ಪಾಂಡ್ಯ!

Share This Article