'ಕಲ್ಕಿ 2898 ಎಡಿ' ಬಿಡುಗಡೆಗೆ ಸಿದ್ಧತೆ..ಯುದ್ಧಭೂಮಿಯಲ್ಲಿ ಅಶ್ವತ್ಥಾಮ!

amithab
Published on

ಹೈದರಾಬಾದ್​: ಪ್ರಭಾಸ್-ನಾಗ್ ಅಶ್ವಿನ್ ಅಭಿನಯದ ಬಹುಭಾಷಾ ಚಿತ್ರ 'ಕಲ್ಕಿ 2898 ಎಡಿ' ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯವನ್ನು ನಡೆಸುತ್ತಿದೆ. ಇದರ ಭಾಗವಾಗಿ ಶುಕ್ರವಾರ ಅಮಿತಾಬ್ ಬಚ್ಚನ್ ಈ ಚಿತ್ರದ ಹೊಸ ಲುಕ್ ಅನ್ನು ಬಿಡುಗಡೆ ಮಾಡಿದ್ದಾರೆ.

ಅದರಲ್ಲಿ ಅಮಿತಾಬ್ ಬಚ್ಚನ್ ಅವರು ಅಶ್ವತ್ಥಾಮ ಪಾತ್ರಧಾರಿಯಾಗಿದ್ದು, ಹಣೆಯಲ್ಲಿ ದಿವ್ಯ ರತ್ನವನ್ನು ಧರಿಸಿ ಕೈಯಲ್ಲಿ ಆಯುಧ ಹಿಡಿದುಕೊಂಡು ಯುದ್ಧಭೂಮಿಯಲ್ಲಿ ನಿಂತಿರುವುದು ಕಂಡುಬರುತ್ತಿದೆ. ಕೆಲವರು ಅವರ ಸುತ್ತ ನೆಲದ ಮೇಲೆ ಮಲಗಿದ್ದರೆ, ಅವರ ಹಿಂದೆ ಬೃಹತ್ ವಾಹನದ ಆಕೃತಿ ಇರುವುದು ಕುತೂಹಲಕಾರಿಯಾಗಿದೆ.

ವಿನೂತನ ವೈಜ್ಞಾನಿಕ ಕಥೆಯನ್ನು ಹೊಂದಿರುವ ಈ ಚಿತ್ರ ಇದೇ ತಿಂಗಳ 27 ರಂದು ಥಿಯೇಟರ್‌ಗೆ ಬರಲಿದೆ. ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net