More

    ‘ಪಾಪನಾಶಂ 2’ ಒಪ್ಪಲು ಕಮಲ್​ ಹಾಸನ್ ಇಟ್ಟ ಷರತ್ತೇನು?

    ಚೆನ್ನೈ: ಮಲಯಾಳಂನ ಸೂಪರ್​ ಹಿಟ್​ ಚಿತ್ರ ‘ದೃಶ್ಯಂ’ನ ತಮಿಳು ರೀಮೇಕ್​ ಆದ ‘ಪಾಪನಾಶಂ’ನಲ್ಲಿ ಕಮಲ್​ ಹಾಸನ್​ ಅಭಿನಯಿಸಿದ್ದು ಗೊತ್ತೇ ಇದೆ. ಈ ರೀಮೇಕ್​, ಮೂಲ ಚಿತ್ರದಷ್ಟು ಯಶಸ್ವಿಯೂ ಆಗಲಿಲ್ಲ, ಜನಪ್ರಿಯತೆಯನ್ನೂ ಪಡೆಯಲಿಲ್ಲ.

    ಇದನ್ನೂ ಓದಿ: ‘ದಿ ಫ್ಯಾಮಿಲಿ ಮ್ಯಾನ್​ 3’ ಯಾವಾಗ ಬರುತ್ತೆ? ಇಲ್ಲಿದೆ ಉತ್ತರ

    ಅದಿರಲಿ, ಇದೀಗ ‘ಪಾಪನಾಶಂ 2’ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ‘ದೃಶ್ಯಂ 2’ ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ಸದ್ದಿಲ್ಲದೆ ತೆಲುಗಿನಲ್ಲಿ ರೀಮೇಕ್​ ಆಯಿತು. ಕನ್ನಡ ಮತ್ತು ಹಿಂದಿಯಲ್ಲೂ ಚಿತ್ರ ರೀಮೇಕ್​ ಆಗುತ್ತಿರುವುದು ಗೊತ್ತಿರುವ ವಿಷಯವೇ. ಹೇಗಿದ್ದರೂ ಮೂರು ಭಾಷೆಗಳಲ್ಲಿ ಚಿತ್ರ ರೀಮೇಕ್​ ಆಗುತ್ತಿದೆ, ತಮಿಳಿನಲ್ಲೂ ಆಗಿಬಿಡಲಿ ಎಂದು ನಿರ್ದೇಶಕ ಜೀತು ಜೋಸಫ್​ ಯೋಚಿಸಿದ್ದಾರೆ. ‘ಪಾಪನಾಶಂ 2’ ಮಾಡೋಣ್ವಾ ಎಂದು ಕಮಲ್​ ಹಾಸನ್​ಗೆ ಸಲಹೆ ಇಟ್ಟಿದ್ದಾರೆ.

    ಕಮಲ್​ ಹಾಸನ್​ ಏನೋ, ಚಿತ್ರ ಮಾಡುವುದಕ್ಕೆ ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಅವರೊಂದು ಕಂಡೀಷನ್​ ಹಾಕಿದ್ದಾರೆ. ಅದನ್ನು ಕೇಳಿದ ನಿರ್ದೇಶಕರಿಗೆ ಟೆನ್ಶನ್​ ಶುರುವಾಗಿದೆ. ಯೋಚನೆ ಮಾಡ್ತೀವಿ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಇಷ್ಟಕ್ಕೂ ಕಮಲ್​ ಹಾಸನ್​ ಅವರಿಟ್ಟ ಕಂಡೀಷನ್​ ಏನು ಎಂಬ ಪ್ರಶ್ನೆ ಬರಬಹುದು? ಅವರು ನಾಯಕಿಯ ಬದಲಾವಣೆಯ ಬೇಡಿಕೆ ಇಟ್ಟಿದ್ದಾರಂತೆ.

    ‘ಪಾಪನಾಶಂ’ನಲ್ಲಿ ಕಮಲ್​ ಪತ್ನಿಯಾಗಿ ಗೌತಮಿ ನಟಿಸಿದ್ದರು. ಈಗ ‘ಪಾಪನಾಶಂ 2’ಗೆ ಗೌತಮಿ ಬೇಡ ಎನ್ನುತ್ತಿದ್ದಾರಂತೆ ಕಮಲ್​. ಅದಕ್ಕೆ ಕಾರಣವೂ ಇದೆ. ಮೊದಲ ಚಿತ್ರ ಬಂದಿದ್ದು ಆರು ವರ್ಷಗಳ ಹಿಂದೆ. ಆ ಸಂದರ್ಭದಲ್ಲಿ ಅವರಿಬ್ಬರೂ ಅನ್ಯೋನ್ಯವಾಗಿದ್ದರು. ಲಿವ್ಇನ್​ ರಿಲೇಶನ್​ಶಿಪ್​ನಲ್ಲಿ ಇದ್ದರು. ಈಗ ಅವರ ಮಧ್ಯೆ ಸಂಬಂಧ ಹಳಸಿದೆ. ಇಬ್ಬರೂ ಜತೆಯಾಗಿ ನಟಿಸದಷ್ಟು ದೂರವಾಗಿದ್ದಾರೆ. ಹಾಗಾಗಿ, ಗೌತಮಿ ಬೇಡ ಎಂದು ಕಮಲ್ ನೇರವಾಗಿ ಹೇಳಿದ್ದಾರಂತೆ. ಅವರ ಬದಲಿ ಮೀನಾ ಅಥವಾ ಬೇರೆ ಯಾರನ್ನಾದರೂ ಹಾಕಿಕೊಳ್ಳಿ ಎಂದು ಸಲಹೆ ನೀಡಿದ್ದಾರಂತೆ.

    ಇದನ್ನೂ ಓದಿ: ಅಮೇಜಾನ್​ ಪ್ರೈಮ್​ ಆಯ್ತು; ಇದೀಗ ನೆಟ್​ಫ್ಲಿಕ್ಸ್​ನತ್ತ ಹೊರಟ ಮನೋಜ್​

    ಮೊದಲ ಚಿತ್ರದಲ್ಲಿ ಗೌತಮಿ ಇದ್ದು, ಅದರ ಮುಂದಿನ ಭಾಗದಲ್ಲಿ ಇಲ್ಲ ಎಂದರೆ ಜನ ಏನಂತಾರೆ ಹೇಳಿ? ಈ ಭಯ ನಿರ್ದೇಶಕರಿಗೂ ಇದೆ. ಆದರೆ, ಕಮಲ್​ ಹಾಸನ್​ ಕೇಳುತ್ತಿಲ್ಲ. ಒಂದು ಪಕ್ಷ ತಾರಾಗಣ ಬದಲಾದರೆ, ಅವರು ನಟಿಸಬಹುದು. ಇಲ್ಲವಾದರೆ, ‘ವಿಕ್ರಮ್​’ ಅಥವಾ ‘ಇಂಡಿಯನ್​ 2’ ಚಿತ್ರದ ಕಡೆ ಹೋಗಬಹುದು ಎಂದು ಹೇಳಲಾಗುತ್ತಿದೆ.

    ನಿನ್ನ ವಯಸ್ಸಿನ ಹೀರೋಯಿನ್​ ಜತೆಗೆ ನಟನೆ ಮಾಡು … ಸಲ್ಮಾನ್​ಗೆ ಸೋಫಿಯಾ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts