

ತಮಿಳುನಾಡು: ಕಾಲಿವುಡ್ನ ಸೂಪರ್ ಸ್ಟಾರ್, ಬಹುಭಾಷಾ ನಟ ಕಮಲ್ ಹಾಸನ್ ಅಭಿನಯದ ಸೂಪರ್ ಹಿಟ್ ಸಿನಿಮಾವೊಂದು ನವೆಂಬರ್ 03 ರಂದು ಮರು ಬಿಡುಗಡೆಗೊಳ್ಳಲು ಸಜ್ಜಾಗಿದೆ.
ಈ ಸುದ್ದಿ ಕಮಲ್ ಹಾಸನ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದ್ದು, ರಾಜ್ ಕಮಲ್ ಫಿಲ್ಮ್ಸ್ ಬ್ಯಾನರ್ನಡಿ ನಿರ್ಮಾಣಗೊಂಡು, 1987 ರಲ್ಲಿ ಬಿಡುಗಡೆಗೊಂಡಿದ್ದ ಕ್ಲಾಸಿಕ್ ಸಿನಿಮಾ 'ಪೆಸುಂ ಪದಂ' ಇದೇ ನವೆಂಬರ್ 3 ರಂದು ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ರಿ-ರಿಲೀಸ್ ಆಗಲು ಸಜ್ಜಾಗಿದೆ.
ಇದನ್ನೂ ಓದಿ: ಸೂರ್ಯನ ಕಿರಣದಿಂದ ಗಣಪತಿ ಚಿತ್ರ ಬಿಡಿಸಿದ ಯುವಕ
ಸಿನಿಮಾವನ್ನು ಇಂದಿನ ಡಾಲ್ಬಿ ಅಟ್ಮಾಸ್ 4K ಆವೃತ್ತಿಗೆ ತಕ್ಕಂತೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲಾಗುವುದು ಎಂದು ಚಿತ್ರ ತಯಾರಕರು ತಿಳಿಸಿದ್ದಾರೆ. ಸಂಗೀತಂ ಶ್ರೀನಿವಾಸ ರಾಂ ನಿರ್ದೇಶನದ ಈ ಚಿತ್ರದ ರಿ-ರಿಲೀಸ್ಗಾಗಿ ಕಮಲ್ ಹಾಸನ್ ಅಭಿಮಾನಿಗಳು ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).