ಕೋ-ಆಪರೇಟಿವ್ ಸೊಸೈಟಿ ಕಚೇರಿಯಲ್ಲೇ ನೇಣು ಹಾಕಿಕೊಂಡ ಮುಖ್ಯಸ್ಥ!

Pub crime
Published on

ಬೆಂಗಳೂರು: ಆರ್ಥಿಕ ವಹಿವಾಟಿನಲ್ಲಿ ಏರುಪೇರಿನಿಂದಾಗಿ ಕೋ-ಆಪರೇಟಿವ್ ಸೊಸೈಟಿಗಳು ಸಂಕಷ್ಟಕ್ಕೆ ಸಿಲುಕುವುದು, ಪರಿಣಾಮವಾಗಿ ಅದರ ಮುಖ್ಯಸ್ಥರು-ಅಧಿಕಾರಿಗಳೂ ತೊಂದರೆಗೀಡಾಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಹೊಸದೇನಲ್ಲ. ಅಂಥದ್ದೇ ಒಂದು ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕಾಮಧೇನು ಕ್ರೆಡಿಕ್ ಕೋ-ಆಪರೇಟಿವ್​ ಸೊಸೈಟಿಯ ಮುಖ್ಯಸ್ಥ ರಾಮಕೃಷ್ಣ (55) ಆತ್ಮಹತ್ಯೆ ಮಾಡಿಕೊಂಡವರು. ಇವರು ಸೊಸೈಟಿಯ ಕಚೇರಿಯಲ್ಲೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಸೆ. 26ರಂದು ಈ ಆತ್ಮಹತ್ಯೆ ನಡೆದಿದ್ದು, ಸಾವಿಗೀಡಾದ ಸ್ಥಳದಲ್ಲಿ ಡೆತ್​ನೋಟ್ ಕೂಡ ಪತ್ತೆಯಾಗಿದೆ.

60 ಲಕ್ಷ ರೂ. ನಷ್ಟದಲ್ಲಿರುವುದನ್ನು ಡೆತ್​​ನೋಟ್​ನಲ್ಲಿ ಉಲ್ಲೇಖಿಸಲಾಗಿದೆ. ಸೊಸೈಟಿಯಿಂದ‌ ಸಾಕಷ್ಟು ಜನರಿಗೆ ಸಾಲ ನೀಡಿದ್ದರು. ಆದರೆ ಕೆಲವರು ಸೊಸೈಟಿಗೆ ಸರಿಯಾಗಿ ಸಾಲ ಮರು ಪಾವತಿ‌ ಮಾಡಿಲ್ಲ. ಹೀಗಾಗಿ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಡೆತ್​​ನೋಟ್​ನಿಂದ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಮೂವರು ವ್ಯಕ್ತಿಗಳನ್ನು ಬೊಮ್ಮನಹಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದವರ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ. ಹಗರಣ ಆರೋಪ ಎದುರಿಸುತ್ತಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್​ ಮಾಜಿ ಸಿಇಒ ವಾಸುದೇವ ಮಯ್ಯ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net