More

    ‘ಸಲ್ಮಾನ್​ ಖಾನ್​ ನಿರೂಪಣೆ ನಮಗೆ ಬೇಕಾಗಿಲ್ಲ!’; ಬಿಗ್​ಬಾಸ್​ ಮಾಜಿ ಸ್ಪರ್ಧಿಯ ಬೇಡಿಕೆ

    ಮುಂಬೈ: ಹಿಂದಿಯ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 14ರ ಶುರುವಿಗೆ ದಿನಗಣನೆ ಪ್ರಾರಂಭವಾಗಿದೆ. ಲಾಕ್​ಡೌನ್​ ಥೀಮ್​ನಲ್ಲಿ ಈ ಸಲದ ಬಿಗ್​ಬಾಸ್​ ಮೂಡಿಬರುತ್ತಿರುವುದು ಪ್ರೇಕ್ಷಕರಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಅಕ್ಟೋಬರ್​ 3ರಿಂದ ಆರಂಭವಾಗಲಿರುವ ಈ ಶೋದಲ್ಲಿ ನಿರೂಪಕ ಸಲ್ಮಾನ್​ ಖಾನ್​ ಸಹ ಪ್ರಮುಖ ಆಕರ್ಷಣೆ.

    ಇದನ್ನೂ ಓದಿ: video-photo/ ಆದಿತ್ಯನ ಕೋಟೆಯಲ್ಲಿ ರಾತ್ರಿಪೂರ್ತಿ ನಡೆಯುತ್ತಿತ್ತು ಮೋಜು ಮಸ್ತಿ!

    ಆದರೆ, ಇಲ್ಲೊಬ್ಬರು ಸಲ್ಮಾನ್​ ಖಾನ್​ ನಿರೂಪಣೆ ಬೇಕಿಲ್ಲ ಎಂದು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
    ಈಗಾಗಲೇ ಭೋಜಪುರಿ ನಟ ಮತ್ತು ಸಿನಿಮಾ ವಿಮರ್ಶಕ ಎಂದು ಹೇಳಿಕೊಳ್ಳುವ ಕಮಾಲ್​ ಕೆ ಖಾನ್​ ಅಲಿಯಾಸ್​ ಕೆಆರ್​ಕೆ, ಸಲ್ಮಾನ್​ ಖಾನ್​ ಅವರ ನಿರೂಪಣೆಯ ಬಗ್ಗೆ ತಕರಾರು ತೆಗೆದಿದ್ದಾರೆ. ಸಲ್ಮಾನ್ ಬೇಡ್ವೇ ಬೇಡ, ರಿಯಾಲಿಟಿ ಶೋ ರದ್ದಾಗಲಿ ಎಂದಿದ್ದಾರೆ.

    ‘ಸಲ್ಮಾನ್​ ಖಾನ್​ ನಿರೂಪಣೆ ನಮಗೆ ಬೇಕಾಗಿಲ್ಲ!’; ಬಿಗ್​ಬಾಸ್​ ಮಾಜಿ ಸ್ಪರ್ಧಿಯ ಬೇಡಿಕೆ

    ‘ಈಗಾಗಲೇ ಕಾಫಿ ವಿಥ್​ ಕರಣ್​ ಕಾರ್ಯಕ್ರಮವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಕ್ಕೆ ನಿರ್ಮಾಪಕರು ಆ ಶೋವನ್ನು ಕೈಬಿಟ್ಟಿದ್ದಾರೆ. ಅದು ನಮ್ಮ ವಿಜಯವಾಗಿತ್ತು. ಇದೀಗ ಬಿಗ್​ಬಾಸ್​ ಸೀಸನ್​ 14ನ್ನು ಬ್ಯಾನ್​ ಮಾಡಬೇಕಿದೆ. ಆ ಮೂಲಕ ನಾವು ಮತ್ತೆ ಗೆಲ್ಲಬೇಕಿದೆ. ತ್ವರಿತವಾಗಿ ನಿರೂಪಕ ಸಲ್ಮಾನ್​ ಖಾನ್​ ಅವರನ್ನು ಕೈಬಿಡಬೇಕು. ಈ ಶೋ ನಿಷೇಧ ಆಗುವವರೆಗೂ ನಾವು ನಿರ್ಮಾಪಕರನ್ನು ಬಿಡುವುದಿಲ್ಲ’ ಎಂದಿದ್ದಾರೆ.

    ಇದನ್ನೂ ಓದಿ: ಡಬ್ಬಿಂಗ್​ ಮಾಡೋಕೂ ನೀನು ಅರ್ಹಳಲ್ಲ!’; ಕಹಿ ಅನುಭವ ಬಿಚ್ಚಿಟ್ಟ ಐಶ್ವರ್ಯಾ ರೈ

    ಅಚ್ಚರಿ ವಿಚಾರ ಏನೆಂದರೆ, ಹೀಗೆ ಸಲ್ಮಾನ್​ ಖಾನ್​ ವಿರುದ್ಧ ಮತ್ತು ಬಿಗ್​ಬಾಸ್​ ಬ್ಯಾನ್​ ಬಗ್ಗೆ ಮಾತನಾಡುತ್ತಿರುವ ಕೆಆರ್​ಕೆ ಬಿಗ್​ಬಾಸ್​ ಸೀಸನ್​ 3ರಲ್ಲಿ ಸ್ಪರ್ಧಿಯಾಗಿದ್ದರು. ಆಗ ಆ ರಿಯಾಲಿಟಿ ಶೋವನ್ನು ಬಿಗ್​ ಬಿ ಅಮಿತಾಬ್​ ಬಚ್ಚನ್​ ನಿರೂಪಣೆ ಮಾಡಿದ್ದರು. (ಏಜೆನ್ಸೀಸ್​)

    ಐಂದ್ರಿತಾ ರೇ-ದಿಗಂತ್​ಗೆ ಸಿಸಿಬಿ ನೋಟಿಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts