

ಬೆಂಗಳೂರು: ಡ್ರಗ್ಸ್ ಕೇಸ್ನ ಕಾಟನ್ಪೇಟೆ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವಾರ 'ಹೌಸ್ ಆಫ್ ಲೈಫ್' ಮೇಲೆ ಇಂದು(ಮಂಗಳವಾರ) ಬೆಳಗ್ಗೆ ಸಿಸಿಬಿ ದಾಳಿ ನಡೆಸಿದ್ದು, ರೆಸಾರ್ಟ್ ನಲ್ಲಿ ಇಂಚಿಂಚೂ ಪರಿಶೀಲನೆ ನಡೆಯುತ್ತಿದೆ. ಇದು ಅಂತಿಂಥ ರೆಸಾರ್ಟ್ ಅಲ್ಲ, ಬೆಂಗಳೂರಿನ ಹೆಬ್ಬಾಳ ಸಮೀಪ ಬರೋಬ್ಬರಿ ನಾಲ್ಕು ಎಕರೆ ವಿಸ್ತೀರ್ಣದಲ್ಲಿದೆ. ಈ ರಂಗಿನ 'ರೆಸಾರ್ಟ್'ನಲ್ಲಿ ನಡುರಾತ್ರಿ ಅಮಲಿನ ಅದ್ದೂರಿ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ. ಆದಿತ್ಯನ ಈ ಕೋಟೆಯಲ್ಲಿ ರಾತ್ರಿ 11 ಗಂಟೆ ಮೇಲೆ ಡಿಜೆ ಸೌಂಡ್, ಮೋಜುಮಸ್ತಿ ನಡೆಯುತ್ತಿತ್ತು. ಅಂದಹಾಗೇ 'ಹೌಸ್ ಆಫ್ ಲೈಫ್' ಹೇಗಿದೆ, ಪಾರ್ಟಿ ಝಲಕ್ ಹೇಗಿತ್ತು ಎಂಬುದಕ್ಕೆ ಇಲ್ಲಿದೆ ಕೆಲ ವಿಡಿಯೋ ಮತ್ತು ಫೋಟೋಗಳು.