More

    ಸರ್ವರಿಗೂ ಸಮಾನ ಅವಕಾಶ ಕಲ್ಪಿಸಿದ ಸಂವಿಧಾನ

    ಕಲಘಟಗಿ: ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನ ಓದಿ ಜೀವನಕ್ಕೆ ನ್ಯಾಯಯುತ ರಕ್ಷಣೆ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹೇಳಿದರು.
    75ನೇ ಸಂವಿಧಾನ ದಿನಾಚರಣೆ ನಿಮಿತ್ತ ಪಟ್ಟಣದ ಅಕ್ಕಿ ಓಣಿಯಲ್ಲಿರುವ ಗ್ರಾಮದೇವತೆಯರ ಚೌತ ಮನೆ ಕಟ್ಟೆ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಮತ್ತು ಸ್ತಬ್ಧ ಚಿತ್ರಗಳ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ದಿನ 18 ತಾಸು ಪರಿಶ್ರಮ ಪಟ್ಟು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಇಡೀ ಪ್ರಪಂಚದಲ್ಲಿ ನಮ್ಮ ಸಂವಿಧಾನವು ಅತ್ಯಂತ ಬಲಿಷ್ಠವಾಗಿ ಪ್ರಜ್ವಲಿಸುತ್ತಿದೆ ಎಂದರು. ಶಿಕ್ಷಕ ಎಚ್.ಕೆ. ದೇಸಾಯಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ತಮ್ಮ ವಚನಗಳ ಮೂಲಕ ಭಾರತದ ಸಂವಿಧಾನವನ್ನು ಪ್ರತಿಪಾದಿಸಿದರು. ಒಂದು ಬಾರಿ ಸಂವಿಧಾನ ಓದಿದರೆ ಅದು ನಿಮ್ಮನ್ನು ಜೀವನದಲ್ಲಿ ನಿರ್ಭಯವಾಗಿ ಬದುಕುವಂತೆ ಮಾಡುತ್ತದೆ ಎಂದರು. ಶಿಕ್ಷಕ ಮೌನೇಶ ಬಡಿಗೇರ ಮಾತನಾಡಿ, ಪ್ರತಿಯೊಬ್ಬರೂ ಸಂವಿಧಾನವನ್ನು ಓದಿ ಅರಿತುಕೊಂಡು ಬಾಳಬೇಕು ಎಂದರು. ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರು, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ನಾಮಫಲಕವಿರುವ ಸ್ತಬ್ಧ ಚಿತ್ರಗಳನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಇಒ ಪಿ.ವೈ. ಸಾವಂತ, ಪಪಂ ಮುಖ್ಯಾಧಿಕಾರಿ ದಾನೇಶ್ವರಿ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಜೆ. ಯೋಗಪ್ಪನವರ, ಪಿಎಸ್‌ಐ ಬಸವರಾಜ ಯತ್ತಿನಗುಡ್ಡ, ವಿ.ಜಿ. ಅಂಗಡಿ, ಶರಣಪ್ಪ ಉಣಕಲ್, ವೃಷಭೇಂದ್ರ ಪಟ್ಟಣಶೆಟ್ಟಿ, ಎಂ.ಆರ್. ತೋಟಗಂಟಿ, ಎಚ್.ಎನ್. ಸುಣಗದ, ಆರ್.ಎಂ. ಹೊಲ್ತಿಕೋಟಿ, ಐ.ವಿ. ಜವಳಿ, ಗಂಗಾಧರ ಗೌಳಿ, ಶಾಂತಾ ರಾಠೋಡ, ಲಕ್ಷ್ಮಣ ಬೆಟಗೇರಿ, ಸುನೀಲ ಗಬ್ಬೂರ, ಪ್ರಕಾಶ ಹುಲಕೊಪ್ಪ, ಯಲ್ಲವ್ವ ಶಿಗ್ಲಿ, ಮಾಲಾ ತುರಿಹಾಳ, ಮಂಜುನಾಥ ಧನಿಗೊಂಡ, ಕೆ.ಬಿ. ಗುಡಿಹಾಳ, ವಾಸು ಲಮಾಣಿ, ಫಕೀರಗೌಡ ದೊಡ್ಡಮನಿ, ಯಲ್ಲಪ್ಪ ಹುಲಮನಿ, ಮಂಜುನಾಥ ಮಾದರ, ಯಲ್ಲಪ್ಪ ಮೇಲಿನಮನಿ, ಮಂಜುನಾಥ ಭೋವಿ, ಸಚಿನ್ ಪವಾರ, ಹನುಮಂತ ಹರಿಜನ, ಸಾತಪ್ಪ ಕುಂಕೂರ, ವಿವಿಧ ಇಲಾಖೆಯ ಅಧಿಕಾರಿಗಳು, ಪಜಾ, ಪಪಂ ಮುಖಂಡರು, ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts