More

    ನೀರಿಗಾಗಿ ಅಫಜಲಪುರ ಬಂದ್ ನಾಳೆ

    ಅಫಜಲಪುರ: ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ಸೋಮವಾರ ನಾಲ್ಕು ದಿನ ಪೂರೈಸಿದ್ದು, ಮಂಗಳವಾರ ೫ನೇ ದಿನಕ್ಕೆ ಪದಾರ್ಪಣೆ ಮಾಡಿದೆ. ಬುಧವಾರ ಅಫಜಲಪುರ ಬಂದ್‌ಗೆ ಕರೆ ನೀಡಲಾಗಿದೆ.

    ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಹೋರಾಟ ಸ್ಥಳಕ್ಕೆ ಶಾಸಕ ಎಂ.ವೈ.ಪಾಟೀಲ್ ಸೋಮವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಭೀಮಗೆ ನೀರು ಹರಿಸುವಂತೆ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದೇನೆ. ಆಲಮಟ್ಟಿಯಲ್ಲಿ ನಡೆದ ನೀರು ಬಳಕೆದಾರರ ಸಭೆಯಲ್ಲೂ ವಿಷಯ ಚರ್ಚಿಸಿದ್ದೇನೆ. ಆದರೆ ನಾರಾಯಣಪುರ ಜಲಾಶಯ ಭೀಮೆಯಿಂದ ೨೫೦ ಕಿಮೀ. ದೂರವಿದ್ದು, ನೀರು ಹರಿಸಲು ಸಮಸ್ಯೆ ಆಗುತ್ತಿದೆ. ಹೀಗಾಗಿ ಬಳಗಾನೂರ ಕೆರೆಯಿಂದ ಕುಡಿಯುವುದಕ್ಕಾಗಿ ನೀರು ಹರಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

    ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ, ರಾಜಕಾರಣ ಬಿಟ್ಟು ಬಚಾವತ್ ಕಾಯ್ದೆಯ ಪ್ರಕಾರ ಭೀಮಾ ನದಿಗೆ ನೀರು ಹರಿಸಿ, ರೈತರ ರಕ್ಷಣೆ ಮಾಡಬೇಕಿದೆ. ಉಜನಿಯಿಂದ ಭೀಮೆಗೆ ನೀರು ಹರಿಸಲು ಮಹಾರಾಷ್ಟç ಸರ್ಕಾರಕ್ಕೆ ಒತ್ತಡ ಹೇರಲು ನಿಯೋಗ ಹೋಗುವ ಕೆಲಸವಾಗಿಲ್ಲ. ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ನೀರು ಬಿಡಿಸುವ ಕೆಲಸ ಮಾಡಬೇಕು. ನಾನು ಹೋರಾಟಕ್ಕೆ ಬೆಂಬಲ ನೀಡುವೆ. ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಮಾಡುವೆ ಎಂದರು.

    ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕರ ಮಾತನಾಡಿ, ಉಜನಿ ಜಲಾಶಯದಲ್ಲಿ ೬೦ ಟಿಎಂಸಿ ನೀರು ಸಂಗ್ರಹವಿದ್ದರೂ, ನೀರಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಹಾಗೂ ಅಧಿಕಾರಿಗಳು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ, ಅಧಿಕಾರಿಗಳ ನೇತೃತ್ವದಲ್ಲಿ ಜಂಟಿ ನಿಯೋಗ ಉಜನಿ ಜಲಾಶಯಕ್ಕೆ ಹೋದಾಗ ಮಾತ್ರ ಸತ್ಯತೆ ಅರಿಯಲು ಸಾಧ್ಯ ಎಂದು ಹೇಳಿದರು.

    ಜಿಪಂ ಮಾಜಿ ಸದಸ್ಯರಾದ ಮತೀನ್ ಪಟೇಲ್​, ಸಿದ್ಧಾರ್ಥ ಬಸರಿಗಿಡ, ಪ್ರಮುಖರಾದ ಸದಾಶಿವ ಮೇತ್ರಿ, ಚಂದು ದೇಸಾಯಿ, ಚಿದಾನಂದ ಮಠ, ರಮೇಶ ಪೂಜಾರಿ, ಮಲ್ಲಿಕಾರ್ಜುನ ಸಿಂಗೆ, ಶರಣು ನೂಲಾ, ಧಾನು ಹಿರೇಮಠ, ಶರಣು ಅಳ್ಳಗಿ, ಶ್ರೀಕಾಂತ ಕಲಕೇರಿ, ಕಂಠೆಪ್ಪ ಬಳೂರ್ಗಿ, ಶಾಂತಕುಮಾರ ಅಂಜುಟಗಿ, ಶ್ರೀಶೈಲ ಬಳೂರ್ಗಿ, ಶಂಕರಗೌಡ ಪಾಟೀಲ್, ಶೈಲೇಶ ಗುಣಾರಿ, ನಾಗರಾಜ ಗುಣಾರಿ, ಧಾನು ನೂಲಾ, ವಿಜಯಕುಮಾರ ವರ್ಧಮಾನ, ಯಶವಂತ ಬಡದಾಳ, ಶರಣು ಪದಕಿ, ಪ್ರಭಾವತಿ ಮೇತ್ರಿ, ದೇವೆಂದ್ರ ಜಮಾದಾರ, ಚಂದ್ರಕಾAತ ಮ್ಯಾಳೇಶಿ, ಅಪ್ಪು ಕಣ್ಣಿ, ಶಿವು ಘಾಣೂರ ಇತರರಿದ್ದರು.

    ಹಿಂದಿನ ಸರ್ಕಾರಗಳ ತಪ್ಪಿನಿಂದ ಉಜನಿ ಜಲಾಶಯದಿಂದ ಸೀನಾ ನದಿಗೆ ಕಾಲುವೆಗಳ ಮೂಲಕ ಅಕ್ರಮವಾಗಿ ನೀರು ಹರಿಸಿ ನಮ್ಮನ್ನು ಕೈ ಚಾಚುವಂತೆ ಮಾಡಲಾಗಿದೆ. ಭೀಮಾ ನದಿಯನ್ನು ಅವಲಂಬಿಸಿ ಅನೇಕ ನೀರಾವರಿ ಯೋಜನೆ ಕೈಗೊಂಡಿದ್ದು, ಇದೀಗ ಸಮಸ್ಯೆ ಆಗುತ್ತಿದೆ. ನಾನು ಸಿಎಂ ಮೇಲೆ ಒತ್ತಡ ಹಾಕುವೆ, ನನ್ನ ಕ್ಷೇತ್ರದ ಜನರ ಹಿತ ಮುಖ್ಯ. ಹೋರಾಟಕ್ಕೆ ಪಕ್ಷಾತೀತ ಬೆಂಬಲ ನೀಡುತ್ತೇವೆ, ಅಮರಣಾಂತ ಉಪವಾಸ ಕೈಬಿಟ್ಟು ಜನಜಾಗೃತಿ ಹೋರಾಟ ಮಾಡೋಣ.
    | ಎಂ.ವೈ.ಪಾಟೀಲ್, ಶಾಸಕ

    ಸದ್ಯ ಆಲಮಟ್ಟಿ, ನಾರಾಯಣಪುರದಿಂದ ಕುಡಿಯುವುದಕ್ಕಾಗಿ ನೀರು ಹರಿಸಿ, ಉಜನಿಯಿಂದ ನಮ್ಮ ಹಕ್ಕಿನ ನೀರು ಪಡೆಯಲು ಹೋರಾಡೋಣ. ಹಿರಿಯ ಶಾಸಕರ ಮಾತಿಗೆ ನನ್ನ ಬೆಂಬಲವಿದೆ. ಆದರೆ ಎಲ್ಲರ ಕ್ಷಮೆ ಕೇಳುವೆ, ನಮ್ಮ ಹಕ್ಕಿನ ನೀರು ಬಂದಾಗ ಮಾತ್ರ ಉಪವಾಸ ಸತ್ಯಾಗ್ರಹ ಕೈ ಬಿಡುವೆ ಎಂದರು.
    | ಶಿವಕುಮಾರ ನಾಟೀಕರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts