More

    ಸಂವಿಧಾನ ತಿದ್ದುಪಡಿಗೆ ಅವಕಾಶ ನೀಡಲ್ಲ

    ಶಿಕಾರಿಪುರ: ಭಾರತ ಸಂವಿಧಾನವನ್ನು ಜಗತ್ತೇ ಗೌರವದಿಂದ ಕಾಣುತ್ತದೆ. ಹೀಗಿರುವಾಗ ನಮ್ಮ ಸಂವಿಧಾನದ ಆಶಯಗಳನ್ನು ಮೊದಲು ನಾವು ಗೌರವಿಸಬೇಕು. ಅದನ್ನು ಬಿಟ್ಟು ತಿದ್ದುಪಡಿ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಮಾತನಾಡುವುದು ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಸೆಲ್ ಕಾರ್ಯದರ್ಶಿ ಜಗದೀಶ್ ಚುರ್ಚಿಗುಂಡಿ ಹೇಳಿದರು.
    ಸಂಸದರಾಗಿ ಆಯ್ಕೆಯಾಗಿದ್ದೇ ಸಂವಿಧಾನದ ಬಲದಿಂದ. ಇವರು ಸಂವಿಧಾನವನ್ನು ನಾಶ ಮಾಡಿ ಮನುವಾದವನ್ನು ಜಾರಿಗೆ ತರಲು ಹೊರಟಿದ್ದಾರೆ. ಬದುಕು ಕಟ್ಟಿಕೊಟ್ಟು ಬೆಳಕು ತಂದಿರುವ ಶ್ರೇಷ್ಠ ಗ್ರಂಥವನ್ನು ಯಾವ ಕಾರಣಕ್ಕೂ ಬದಲಿಸಲು ಸಾಧ್ಯವಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಚುನಾವಣೆ ಬಂದಾಗಲೆಲ್ಲ ಇಂತಹ ಹೇಳಿಕೆಗಳನ್ನು ನೀಡುವುದನ್ನು ರೂಢಿಸಿಕೊಂಡಿದ್ದಾರೆ. ಸಾವಿರಾರು ಜನರು ಸಂವಿಧಾನದ ನೆರಳಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಮಾನತೆಯ ಸಮಾಜ ನಿರ್ಮಾಣವೇ ಸಂವಿಧಾನದ ಮೂಲ ಆಶಯ. ತಿದ್ದುಪಡಿಗೆ ಮುಂದಾದಲ್ಲಿ ದೇಶದಾದ್ಯಂತ ಹೋರಾಟ ನಡೆಯುವುದು ಖಚಿತ. ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

    ಚಿಕ್ಕಜೋಗಿಹಳ್ಳಿ ವೀರೇಶ್, ಮಾರವಳ್ಳಿ ಉಮೇಶ್, ಪರಮೇಶ್ವರಪ್ಪ, ಹನುಮಂತಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts