More

    ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಈಡೇರಿಸಿದೆ: ಪ್ರಿಯಾಂಕಾ ಜಾರಕಿಹೊಳಿ

    ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‌ಗೆ ಮತ ನೀಡಿ ನನ್ನನ್ನು ಆಶೀರ್ವದಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮನವಿ ಮಾಡಿದರು.
     ಜಿಲ್ಲೆಯ ನಿಪ್ಪಾಣಿಯ ಕರದಗಾ ಹಾಗೂ ಭೋಜ ಜಿಪಂ ವ್ಯಾಪ್ತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತು. 158 ಭರವಸೆ ಈಡೇರಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಹಾಗೂ ವಿದ್ಯಾಸಿರಿ ಯೋಜನೆ ಈಡೇರಿಸಿದೆ. ಅಲ್ಲದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ 9 ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆ ಈಡೇರಿಸಿದೆ ಎಂದು ಹೇಳಿದರು.
     ಬಡವರ ಪರವಾದ ಕಾರ್ಯಕ್ರಮ ನೀಡುವುದು ಕಾಂಗ್ರೆಸ್ ಮಾತ್ರ. ಇದನ್ನು ಮತದಾರರು ಬೆಂಬಲಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಇಂದಿರಾಗಾಂಧಿ ಅವರಿಂದ ಹಿಡಿದು ಸಿದ್ದರಾಮಯ್ಯವರೆಗೆ ಕಾಂಗ್ರೆಸ್, ಬಡವರ ಪರ ಕೆಲಸ ಮಾಡಿದೆ. ನಮ್ಮ ಸರ್ಕಾರ ಬಡವರ ಪರವಾಗಿದ್ದು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಕಾಂಗ್ರೆಸ್ ಯೋಜನೆಯಿಂದ ಪ್ರತಿ ಕುಟುಂಬಗಳಿಗೆ 4ರಿಂದ 5 ಸಾವಿರ ರೂ. ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ ಮನೆಯ ಗೃಹಿಣಿಯರು 2000 ರೂ. ಪಡೆದುಕೊಳ್ಳುತ್ತಿದ್ದಾರೆ. ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ, 5 ಕೆಜಿಗೆ ಹಣ ನೀಡಲಾಗುತ್ತಿದೆ. ಆದ್ದರಿಂದ ಮತದಾರರು ಕ್ಷೇತ್ರದ ಅಭಿವೃದ್ಧಿಗೆ ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
     ಸಮಸ್ಯೆಗಳ ನಿವಾರಣೆಗೆ ಮತ ನೀಡಿ:
     ಈ ಬಾರಿ ಚಿಕ್ಕೋಡಿ ಸಮಗ್ರ ಅಭಿವೃದ್ಧಿಗೆ ನನಗೆ ಬೆಂಬಲ ನೀಡಿ. ನಮ್ಮ ತಂದೆ ಸತೀಶ್ ಜಾರಕಿಹೊಳಿ ಕೈ ಬಲಪಡಿಸಬೇಕು. ಕೇವಲ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಪುತ್ರಿ ಅಲ್ಲ ನಮ್ಮ ನಿಪ್ಪಾಣಿ ಕ್ಷೇತ್ರದ ಮನೆ ಮಗಳು. ಹೀಗಾಗಿ ಈ ಬಾರಿ ಸಮಸ್ಯೆಗಳ ನಿವಾರಣೆಗೆ ಹಾಗೂ ಕ್ಷೇತ್ರ ಅಭಿವೃದ್ಧಿಗೆ ನನಗೆ ಮತ ನೀಡಬೇಕು ಎಂದರು.
     ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ, ಮಾಜಿ ಸಚಿವ ವೀರಕುಮಾರ ಪಾಟೀಲ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸಚಿನ್ ಕೇಸ್ತಿ, ಲಕ್ಷ್ಮಣ ಇಂದಲಕರ, ಶಂಕರ ಪಾಟೀಲ, ಸುಪ್ರಿಯಾ ಪಾಟೀಲ, ಬಸವರಾಜ ಪಾಟೀಲ, ರಾಜು ವಡ್ಡರ, ಪಂಕಜ ಪಾಟೀಲ, ರಾಜೇಶ ಕದಂ, ಡಾ. ಮಾಣೆ ಸೇರಿ ನೂರಾರು ಕಾರ್ಯಕರ್ತರು, ವಿವಿಧ ಗ್ರಾಮದ ಮಹಿಳೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts