

ಕಲಬುರಗಿ: ಹದಿನೈದು ವರ್ಷದ ಹಿಂದೆಯೇ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿದ್ದ ವ್ಯಕ್ತಿ, ಇದೀಗ ಕೊನೆಯುಸಿರೆಳೆದಿರುವ ಘಟನೆ ಜೇವರ್ಗಿ ತಾಲೂಕಿನ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.
ಹಿಪ್ಪರಗಾ ಗ್ರಾಮದ ಸಿದ್ದಪ್ಪ 96 ನಿಧನ ಹೊಂದಿದ ವ್ಯಕ್ತಿ. ತಮ್ಮ ಸಾವಿನ ಬಳಿಕ ಸಹ ಯಾರಿಗೂ ಭಾರ ಆಗಬಾರದು ಅಂತ ಸಿದ್ದಪ್ಪ ತಮ್ಮ ಸಮಾಧಿಯನ್ನು ತಾವೇ ತೋಡಿಕೊಂಡಿದ್ದರು. ಇದೀಗ ಸಿದ್ದಪ್ಪ ಸಾವಿನ ಬಳಿಕ ಅವರು ತೋಡಿದ್ದ ಕಣಿಯಲ್ಲೇ ಅಂತ್ಯ ಸಂಸ್ಕಾರ ಮಾಡಲಾಗಿದೆ.
15 ವರ್ಷದ ಹಿಂದೆ ಸಿದ್ದಪ್ಪ ಜೋಡು ಕುಣಿ ತೋಡಿದ್ದರು. 6 ವರ್ಷಗಳ ಹಿಂದೆ ಅವರ ಪತ್ನಿ ನೀಲಮ್ಮ ನಿಧನ ಹೊಂದಿದ್ದಾಗ ಒಂದು ಕಣಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು. ಇದೀಗ ನಿನ್ನೆ ಸಿದ್ದಪ್ಪ ಸಾವಿನ ಬಳಿಕ ಪತ್ನಿಯ ಪಕ್ಕದ ಕುಣಿಯಲ್ಲಿ ಸಿದ್ದಪ್ಪನಿಗೆ ಅಂತ್ಯ ಸಂಸ್ಕಾರ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್)