ಆಧಾರ್​-ಪ್ಯಾನ್​ ಲಿಂಕ್​ ಮಾಡಲು ನಾಳೆಯೇ ಕೊನೇ ದಿನ: ಕಾರ್ಡ್​ ನಿಷ್ಕ್ರಿಯವಾಗುವ ಮುನ್ನ ಈಗಲೇ ಲಿಂಕ್​ ಮಾಡಿ…

PAN Aadhaar Linik
Published on

ನವದೆಹಲಿ: ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಗಡುವು ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಒಂದು ದಿನ ಮಾತ್ರ ಬಾಕಿ ಇದೆ. ಆದಾಯ ತೆರಿಗೆ ಇಲಾಖೆ ಕಳೆದ ಮೂರು ತಿಂಗಳುಗಳಲ್ಲಿ ಹಲವು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಜೂನ್​ 30ಕ್ಕೆ ಕೊನೆಯ ದಿನಾಂಕ ಎಂದು ಘೋಷಿಸಿತ್ತು. ಇದೀಗ ಆ ದಿನ ಬಂದಿದ್ದು, ನಾಳೆ ಒಳಗೆ ನಿಮ್ಮ ಆಧಾರ್​​ ಕಾರ್ಡ್​ ಮತ್ತು ಪ್ಯಾನ್​ ಕಾರ್ಡ್​ ಲಿಂಕ್​ ಮಾಡದಿದ್ದರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯಗೊಳ್ಳಲಿದೆ.

ಪ್ಯಾನ್​ ಕಾರ್ಡ್​ ನಿಷ್ಕ್ರಿಯತೆಯಿಂದ ತಪ್ಪಿಸಿಕೊಳ್ಳಲು ತಕ್ಷಣವೇ ಆಧಾರ್​ನೊಂದಿಗೆ ಲಿಂಕ್​ ಮಾಡಿಸಿ, ಇಲ್ಲವಾದಲ್ಲಿ ಮುಂದೆ ಭಾರೀ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಈ ಮೊದಲು ಏಪ್ರಿಲ್ 2022 ಮತ್ತು 30 ಜೂನ್ 2022ರ ನಡುವೆ ಲಿಂಕ್​ ಮಾಡಿದ್ದರೆ 500 ರೂ ದಂಡವನ್ನು ಪಾವತಿಸಬೇಕಾಗಿತ್ತು. ಈಗ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1,000 ರೂ ದಂಡ ಕಟ್ಟಬೇಕು ಎಂದು ಐಟಿ ಇಲಾಖೆ ಹೇಳಿದೆ. ಅದು ಕೂಡ ನಾಳೆಯೇ ಕೊನೆ ದಿನ. ಹೀಗಾಗಿ ತಕ್ಷಣ ಲಿಂಕ್​ ಮಾಡಿಸಿ.

ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಎಂಬ ಗೊಂದಲ ಬೇಡ. ಮೊದಲಿಗೆ ಲಿಂಕ್ ಆಗಿದೆಯೇ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ. ಅದಕ್ಕಾಗಿ ಈ ಕೆಳಗಿನ ಲಿಂಕ್​ ಬಳಸಿ, ನಂತರ ತೆರೆದುಕೊಳ್ಳುವ ಪುಟದಲ್ಲಿ ಪ್ಯಾನ್​ ಹಾಗೂ ಆಧಾರ್ ನಂಬರ್ ನಮೂದಿಸಿ, ‘ವ್ಯೂ ಲಿಂಕ್ ಆಧಾರ್ ಸ್ಟೇಟಸ್​’ ಕ್ಲಿಕ್ ಮಾಡಿ. ಆಗ ನಿಮ್ಮ ಪ್ಯಾನ್​-ಆಧಾರ್ ಲಿಂಕ್ ಆಗಿದೆಯೇ ಇಲ್ಲವೇ ಎಂಬುದು ಖಚಿತವಾಗುತ್ತದೆ.

ಪ್ಯಾನ್-ಆಧಾರ್ ಲಿಂಕ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

https://eportal.incometax.gov.in/iec/foservices/#/pre-login/link-aadhaar-statusಲಿಂಕ್​ ಆಗಿಲ್ಲ ಎಂದಾದರೆ, ನಿಮ್ಮ ಆಧಾರ್-ಪ್ಯಾನ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಿ

1. www.incometax.gov.in ನಲ್ಲಿ ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ನಿಮ್ಮ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಆದಾಯ ತೆರಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.

3. ಪಾಪ್-ಅಪ್ ವಿಂಡೋ ಹೊರಹೊಮ್ಮುತ್ತದೆ

4. ಇಲ್ಲದಿದ್ದರೆ, ಮೆನು ಬಾರ್‌ನಿಂದ ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ಹುಡುಕಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಆರಿಸಿ.

5. ಹೊಸ ವಿಂಡೋ ಕಾಣಿಸುತ್ತದೆ.

6. ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ವಿವರಗಳು, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

7. ಮಾಹಿತಿಯನ್ನು ಫೀಡ್​ ಮಾಡಿದ ನಂತರ, ‘ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್​ ಮಾಡಲು ನಾನು ಒಪ್ಪುತ್ತೇನೆ’ ಎನ್ನುವ ಆಯ್ಕೆಯನ್ನು ಆರಿಸಿ.

8. ಈಗ ‘ಮುಂದುವರಿಸಿ’ ಬಟನ್ ಕ್ಲಿಕ್ ಮಾಡಿ.

9. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.

10. ಪರದೆಯ ಮೇಲಿನ ಖಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ‘ವ್ಯಾಲಿಡೇಟ್’ ಬಟನ್ ಒತ್ತಿರಿ.

11. ನೀವು ದಂಡವನ್ನು ಪಾವತಿಸಿದ ನಂತರ, ನಿಮ್ಮ ಪ್ಯಾನ್-ಆಧಾರ್ ಲಿಂಕ್ ಸಂಪನ್ನವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net