ಇನ್​ಸ್ಟಾಗ್ರಾಂನಲ್ಲಿ ನಟಿ ಕಾಜಲ್ ಅಗರ್​ವಾಲ್​ ಹವಾ

Kajal
Published on

ಸೋಷಿಯಲ್ ಮೀಡಿಯಾ ವೇದಿಕೆ ಇನ್​ಸ್ಟಾಗ್ರಾಂನಲ್ಲಿ ದಕ್ಷಿಣ ಭಾರತದ ನಟಿ ಕಾಜಲ್ ಅಗರ್​ವಾಲ್ ಹೊಸ ಮೈಲಿಗಲ್ಲು ತಲುಪಿದ್ದಾರೆ. ಒಟ್ಟು 2 ಕೋಟಿ (20 ಮಿಲಿಯನ್) ಹಿಂಬಾಲಕರು ಹೊಂದುವ ಮೂಲಕ ಅತೀ ಹೆಚ್ಚು ಹಿಂಬಾಲಕರು ಹೊಂದಿದ ದಕ್ಷಿಣದ ನಟಿಯರ ಪೈಕಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಮೊದಲ ಸ್ಥಾನದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (22 ಮಿಲಿಯನ್) ಇದ್ದರೆ, ಇನ್ನುಳಿದಂತೆ ಸಮಂತಾ (19 ಮಿ), ತಾಪ್ಸೀ (19 ಮಿ), ರಾಕುಲ್ ಪ್ರೀತ್ ಸಿಂಗ್ (17 ಮಿ), ಪೂಜಾ ಹೆಗ್ಡೆ (15 ಮಿ), ತಮನ್ನಾ (14 ಮಿ), ಕೀರ್ತಿ ಸುರೇಶ್ (1 ಕೋಟಿ) ಹಿಂಬಾಲಕರು ಹೊಂದಿದ ನಾಯಕಿಯರಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net