ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ​ ಕಂಡಿಷನ್​ ಕ್ರಿಟಿಕಲ್: ಅಳಿಯ ಪ್ರದೀಪ್ ಮಾಹಿತಿ

Pradeep Shivaram
Published on

ಬೆಂಗಳೂರು: ಮಾಜಿ ಎಐಎಸ್​ ಅಧಿಕಾರಿ, ಬಿಜೆಪಿ ಮುಖಂಡ, ಹಿರಿಯ ನಟಿ ಕೆ. ಶಿವರಾಂ ಅವರಿಗೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಅವರನ್ನು ಐಸಿಯುನಲ್ಲಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಶಿವರಾಂ ಅವರ ಅಳಿಯ ನಟ ಪ್ರದೀಪ್​ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಟ ಪ್ರದೀಪ್​ ಕನ್ನಡದಲ್ಲಿ ಮೊದಲ ಬಾರಿಗೆ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದವರು ನಮ್ಮ ಮಾವ ಶಿವರಾಂ ಅವರು ಫೆ.3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಬಾರಿ ಅವರಿಗೆ ಒಂದು ಸಣ್ಣ ಶಸ್ತ್ರ ಚಿಕಿತ್ಸೆ ಆಗಿತ್ತು. ಅದೇ ಡಾಕ್ಟರ್ ಇಲ್ಲಿ ಇರುವುದರಿಂದ ನಾವು ಇಲ್ಲಿಗೆ ದಾಖಲು ಮಾಡಿದ್ದೆವು. ಆಸ್ಪತ್ರೆಗೆ ಅಡ್ಮಿಟ್ ಆದಮೇಲೆ ಲೋ ಬಿಪಿ ಸಮಸ್ಯೆ ಶುರುವಾಯ್ತು. ಅವರಿಗೆ ಟ್ರೀಟ್‌ಮೆಂಟ್ ನಡೆಯುತ್ತಿದೆ.

ಕಳೆದ 5-6 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾಗಿ ಹೃದಯಾಘಾತ ಆಗಿತ್ತು. ಅಲ್ಲಿಂದ ಪರಿಸ್ಥಿತಿ ಕೊಂಚ ಗಂಭೀರವಾಗಿದೆ. ಸದ್ಯ ಅವರ ಪರಿಸ್ಥಿತಿ ಚಿಂತಾಜನಕವಾಗಿಯೇ ಇದೆ. ಅವರಿಗೆ ಸಿಕ್ಕಾಪಟ್ಟೆ ಬಿಪಿ ಸಮಸ್ಯೆ ಇತ್ತು. ಅವರ ಬಿಪಿ ಕಂಟ್ರೋಲ್‌ಗೆ ಸಿಕ್ತಾ ಇಲ್ಲ. ಒಂದು ಸಲ ಜಾಸ್ತಿ ಇದ್ದರೆ, ಮತ್ತೊಂದು ಸಲ ಕಡಿಮೆ ಇರುತ್ತದೆ. ಅವರ ಸ್ಥಿತಿ ಚಿಂತಾಜನಕವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ನಟ ಪ್ರದೀಪ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net