ಈ 5 ಬಿಳಿ ಆಹಾರಗಳಿಂದ ದೂರವಿದ್ರೆ ನೀವು ಜೀವನಪೂರ್ತಿ ಆರೋಗ್ಯವಾಗಿರಬಹುದು! ಉಪಯುಕ್ತ ಮಾಹಿತಿ ಇಲ್ಲಿದೆ… White foods

White foods

White Foods : ಇತ್ತೀಚಿನ ದಿನಗಳಲ್ಲಿ ಅನೇಕರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆರೋಗ್ಯವಾಗಿರಬೇಕಾದರೆ ಆಹಾರದ ವಿಷಯದಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು. ಅದರಲ್ಲೂ ಈ 5 ಆಹಾರಗಳನ್ನು ನೀವು ತಪ್ಪಿಸಲೇಬೇಕು. ಇವುಗಳನ್ನು ಸೇವಿಸುವುದು ವಿಷಕ್ಕೆ ಸಮಾನ ಎಂಬುದನ್ನು ನೆನಪಿಡಿ. ನಾವೀಗ ಆ ಐದು ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ.

ಮೊದಲಿಗೆ ಬಿಳಿ ಸಕ್ಕರೆಯನ್ನು ತೆಗೆದುಕೊಳ್ಳಬೇಡಿ. ಸಕ್ಕರೆಯ ಸೇವನೆಯು ಆರೋಗ್ಯಕ್ಕೆ ತುಂಬಾನೇ ಡೇಂಜರ್​. ಇದು ಮಧುಮೇಹದ ಜೊತೆಗೆ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ, ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಕ್ಯಾನ್ಸರ್​ ಉಂಟು ಮಾಡುವ ಸಾಧ್ಯತೆಯೂ ಇದೆ.

White foods

ಹಾಗೆಯೇ ಬಿಳಿ ಬ್ರೆಡ್ ತಿನ್ನಬಾರದು. ಏಕೆಂದರೆ, ಬಿಳಿ ಬ್ರೆಡ್​ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಮಧುಮೇಹ ಇರುವವರಿಗೆ ಇದು ತುಂಬಾ ಅಪಾಯಕಾರಿ. ಬಿಳಿ ಬ್ರೆಡ್ ಹೆಚ್ಚಿನ ಕ್ಯಾಲೋರಿಗಳು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿದೆ, ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಬಿಳಿ ಬ್ರೆಡ್‌ನಲ್ಲಿ ಹೆಚ್ಚಿನ ಪ್ರಮಾಣದ ಪಿಷ್ಟ ಮತ್ತು ಕಡಿಮೆ ಫೈಬರ್ ಇರುತ್ತದೆ, ಇದು ಉಬ್ಬುವುದು, ಮಲಬದ್ಧತೆ ಮತ್ತು ಎದೆಯುರಿ ಮುಂತಾದ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ಸ್ಟಾರ್ಕ್​ಗೆ 24 ಕೋಟಿ ನಿಮ್ಗೆ ಮಾತ್ರ 55 ಲಕ್ಷ ಅಂದಿದ್ರು ಇಂದು ಸಿಕ್ಕಿದ್ದು 13 ಕೋಟಿ! ರಿಂಕು ಮಾತಿಗೆ ಒಲಿದ ಧನ ದೇವತೆ | Rinku Singh

White foods 1

ಮೂರನೆಯದು ಹೆಚ್ಚು ಅನ್ನವನ್ನು ಸೇವಿಸಬಾರದು. ಅನ್ನ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ. ಇದರಿಂದ ಹೃದಯದ ತೊಂದರೆ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಬಿಳಿ ಅಕ್ಕಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ. ಹೆಚ್ಚಿನ ಕ್ಯಾಲೋರಿ ಸೇವನೆಯು ಸೊಂಟದ ಸುತ್ತ ಕೊಬ್ಬು ಶೇಖರಣೆಗೆ ಕಾರಣವಾಗಬಹುದು. ತೂಕ ಹೆಚ್ಚಾಗುವುದು ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಂತಹ ಸಮಸ್ಯೆಗಳು ಉದ್ಭವಿಸುತ್ತವೆ.

Rice

ನಾಲ್ಕನೇಯದಾಗಿ ಉಪ್ಪನ್ನು ಅತಿಯಾಗಿ ತೆಗೆದುಕೊಳ್ಳಬಾರದು. ಏಕೆಂದರೆ, ರಕ್ತದಲ್ಲಿನ ಹೆಚ್ಚಿನ ಸೋಡಿಯಂ ಮಟ್ಟವು ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ದೇಹದಿಂದ ಹೆಚ್ಚುವರಿ ಉಪ್ಪನ್ನು ತೆಗೆದುಹಾಕಲು ಮೂತ್ರಪಿಂಡಗಳು ಹೆಚ್ಚಿನ ಸಮಯವನ್ನು ಕೆಲಸ ಮಾಡುತ್ತವೆ. ಇದು ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಬಹುದು. ಹೆಚ್ಚಿನ ಸೋಡಿಯಂ ಆಹಾರವು ದೇಹವು ಕ್ಯಾಲ್ಸಿಯಂ ಅನ್ನು ಹೊರಹಾಕಲು ಕಾರಣವಾಗಬಹುದು. ಇದು ಆಸ್ಟಿಯೊಪೊರೋಸಿಸ್​ಗೆ ಕಾರಣವಾಗಬಹುದು. ಕೆಲವು ಅಧ್ಯಯನಗಳು ಹೆಚ್ಚಿನ ಉಪ್ಪಿನ ಆಹಾರವು ಹೊಟ್ಟೆಯ ಕ್ಯಾನ್ಸರ್​ ಅಪಾಯಕ್ಕೆ ಸಂಬಂಧಿಸಿವೆ ಎಂದು ಹೇಳಿವೆ.

ಇದನ್ನೂ ಓದಿ: ಅರೆಬರೆ ಬಟ್ಟೆಯಲ್ಲಿ ಮೈಚಳಿ ಬಿಟ್ಟು ಕುಣಿದ ಅಮಲಾ ಪೌಲ್​! ವಿಡಿಯೋ ನೋಡಿ ಕಿಡಿಕಾರಿದ ಫ್ಯಾನ್ಸ್​ | Amala Paul

Salt

ಐದನೆಯದು ಬಿಳಿ ಬೆಣ್ಣೆ. ಇದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಳಿ ಬೆಣ್ಣೆ ಹೃದಯಕ್ಕೆ ಹಾನಿಕಾರಕವಾಗಿದೆ. ಅಲ್ಲದೆ, ಪೋಷಕಾಂಶಗಳ ಅಸಮತೋಲನ ಮತ್ತು ರಕ್ತದ ಸಕ್ಕರೆಯ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಇದರಲ್ಲಿ ಅಧಿಕ ಕೊಬ್ಬು ಇರುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಬಿಳಿ ಬೆಣ್ಣೆ ಬದಲು ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸಬಹುದು. ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಆರೋಗ್ಯವಾಗಿರಬಹುದು. ಇಲ್ಲವಾದಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

White foods 2

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಲ್ಲಿ ದೊರೆತ ಮಾಹಿತಿ ಆಧಾರದ ಮೇಲೆ ಸಂಗ್ರಹಿಸಲಾಗಿದ್ದು, ಇದು ಕೇವಲ ಜಾಗೃತಿಗಾಗಿ ಮಾತ್ರ. ಇದನ್ನು ವಿಜಯವಾಣಿ.ನೆಟ್​ ದೃಢೀಕರಿಸುವುದಿಲ್ಲ. ಇದನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಯಾವಾಗಲೂ ಉತ್ತಮ.

ಪ್ರತಿನಿತ್ಯ 5 ನೆನೆಸಿದ ಗೋಡಂಬಿ ತಿಂದರೆ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ… Soaked Cashews

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…