Amala Paul : ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ವಿಚಾರ ಹಾಗೂ ವಿವಾದಗಳಿಂದಲೂ ಅಮಲಾ ಪೌಲ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅಮಲಾ, ಆಗಾಗ ಹಾಟ್ ಫೋಟೋಗಳನ್ನು ಹರಿಬಿಡುತ್ತಲೇ ಇರುತ್ತಾರೆ. ತಮ್ಮ ಅರೆಬರೆ ಬಟ್ಟೆಯಿಂದಲೇ ಸುದ್ದಿಯಾಗುವ ಅಮಲಾ, ಕೆಲವರ ಕೆಂಗಣ್ಣಿಗು ಗುರಿಯಾಗಿ ಟೀಕೆಗಳನ್ನು ಎದುರಿಸುತ್ತಾರೆ. ಇದೀಗ ಅದೇ ವಿಚಾರಕ್ಕೆ ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ.
ಸದ್ಯ ಅಮಲಾ ಅವರು ಇಂಡೋನೇಷ್ಯಾದ ಬಾಲಿಯಲ್ಲಿ ರಜೆಯ ಮೋಜು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನುಮ ಇತ್ತೀಚಗೆ ಅಮಲಾ ಹಂಚಿಕೊಂಡಿದ್ದು, ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಿಳಿ ಬಣ್ಣದ ಬ್ರಾಲೆಟ್, ನೀಲಿ ಬಣ್ಣದ ಶಾರ್ಟ್ಸ್ ಮತ್ತು ಬಿಳಿ ಬಣ್ಣದ ಉದ್ದನೆಯ ಶ್ರಗ್ ಅನ್ನು ಅಮಲಾ ಧರಿಸಿದ್ದಾರೆ. ಆಳವಾದ ಎದೆ ಸೀಳು ಕಾಣುವಂತೆ ಉಡುಗೆ ಧರಿಸಿ ಬೀಚ್ ಮತ್ತು ಪೂಲ್ ಪಾರ್ಟಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ಶೇರ್ ಆದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಕೇವಲ 14 ಗಂಟೆಗಳ ಹಿಂದಷ್ಟೇ ಅಪ್ಲೋಡ್ ಆಗಿರುವ ವಿಡಿಯೋ ಈವರೆಗೆ 3 ಮಿಲಿಯನ್ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 1 ಲಕ್ಷಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. 900ಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ.
ತಾಯಿಯಾದ ಮೇಲೂ ಅಮಲಾ ಪೌಲ್ ಅವರ ಆತ್ಮವಿಶ್ವಾಸ, ಹುಮ್ಮಸ್ಸಿಗೆ ಕಮ್ಮಿಯಾಗಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ನಿಮ್ಮ ಉಡುಗೆ ಸರಿಯಿಲ್ಲ ಎಂದು ಟೀಕಿಸುತ್ತಿದ್ದಾರೆ. ಆದರೆ, ನೆಗೆಟಿವ್ ಕಾಮೆಂಟ್ಗಳಿಗೆ ತಲೆ ಕೆಡಿಸಿಕೊಳ್ಳದ ಅಮಲಾ ರಜೆಯ ಮೋಜನ್ನು ಸವಿಯುತ್ತಿದ್ದಾರೆ.
ಸದ್ಯ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿರುವ ಅಮಲಾ, ಗೆಳೆಯ ಜಗತ್ ದೇಸಾಯಿ ಅವರನ್ನು ಮದುವೆಯಾಗಿ ಸಾಂಸಾರಿಕ ಜೀವನ ಸಾಗಿಸುತ್ತಿದ್ದಾರೆ. ಇದೇ ವರ್ಷ ಜೂನ್ 11ರಂದು ಸೌತ್ ಬ್ಯೂಟಿ ಅಮಲಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ILAI (ಇಳೈ) ಎಂದು ಹೆಸರಿಟ್ಟಿದ್ದಾರೆ. (ಏಜೆನ್ಸೀಸ್)
ಜಾಮೀನು ಪಡೆದು ಹೊರಗಿರುವ ದರ್ಶನ್ ಮೇಲೆ ಹದ್ದಿನ ಕಣ್ಣು: ಸ್ವಲ್ಪ ಯಮಾರಿದ್ರೂ ಸಂಕಷ್ಟ ತಪ್ಪಿದ್ದಲ್ಲ! Actor Darshan
ಪ್ರತಿನಿತ್ಯ 5 ನೆನೆಸಿದ ಗೋಡಂಬಿ ತಿಂದರೆ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ… Soaked Cashews