

ಮೈಸೂರು: ಇಡೀ ಜಿಲ್ಲೆಯನ್ನೇ ಆತಂಕಕ್ಕೆ ದೂಡಿದ್ದ ಜ್ಯುಬಿಲಿಯೆಂಟ್ ಕಾರ್ಖಾನೆಗೆ ಕರೊನಾ ಸೋಂಕು ತಗುಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆಯಲ್ಲಿ ಮೂರು ಕಾರಣಗಳು ಸ್ಪಷ್ಟವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ ತಬ್ಲಿಘಿ ಮಾದರಿಯ ಸಭೆ ನಡೆದಿತ್ತು. ಆ ಸಭೆಗೆ ಜ್ಯುಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕ ಹೋಗಿ ಬಂದಿದ್ದ. ಇದು ಮೊದಲ ಕಾರಣವಾಗಿದೆ. ಎರಡನೇಯದ್ದು ಆಡಿಟ್ಗಾಗಿ ದೇಶದ ಬೇರೆ ರಾಜ್ಯದ ಕೆಲವರು ಕಾರ್ಖಾನೆಗೆ ಬಂದಿದ್ದರು. 3ನೇ ಕಾರಣ ಜ್ಯುಬಿಲಿಯೆಂಟ್ ಕಾರ್ಖಾನೆಯ ಅಧಿಕಾರಿಗಳು ದೇಶದ ಬೇರೆ ಬೇರೆ ಭಾಗಕ್ಕೆ ಹೋಗಿ ಬಂದಿದ್ದಾರೆಂದು ತಿಳಿಸಿದರು.
ಮೇಲಿನ ಈ 3 ಕಾರಣಗಳಲ್ಲಿ ಯಾವುದೋ 1 ಕಾರಣದಿಂದ ಸೋಂಕು ಬಂದಿರಬಹುದು. ಪೊಲೀಸರ ತನಿಖಾ ವರದಿಯಲ್ಲಿ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹರ್ಷಗುಪ್ತ ಅವರ ತನಿಖಾ ವರದಿ ನನ್ನ ಕೈ ಸೇರಿಲ್ಲ. ಆದರೆ ಅವರು ತನಿಖೆಗೆ 1 ತಿಂಗಳು ತಡವಾಗಿದೆ ಎಂದು ಹೇಳಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಸೋಮಶೇಖರ್ ಹೇಳಿದರು.