More

    ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

    ನವದೆಹಲಿ: ಭಾರತವು ಕರೊನಾ ವೈರಸ್​ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದರೆ, ಗುಜರಾತ್​ನ ದೇವಸ್ಥಾನವೊಂದರಲ್ಲಿ ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಜಾಲವನ್ನು ಭೇದಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಒಂದು ವೈರಲ್​ ಆಗಿದೆ.

    ನ್ಯೂಸ್​ಐಡಲ್​ (NewsIdol) ಎಂಬ ಫೇಸ್​ಬುಕ್​ ಪೇಜ್​ನಲ್ಲಿ “ಜೀ ಬಿಹಾರ ಜಾರ್ಖಂಡ್​” ನ್ಯೂಸ್​ ಕ್ಲಿಪ್ಪಿಂಗ್​ ಅನ್ನು ಪೋಸ್ಟ್​ ಮಾಡಿ ಹಿಂದಿಯಲ್ಲಿ ಅಡಿ ಬರಹವನ್ನು ಬರೆಯಲಾಗಿದ್ದು, ಅದರ ಸಾರಾಂಶ ಹೀಗಿದೆ… ಒಂದೆಡೆ ಇಡೀ ದೇಶವೇ ಕರೊನಾ ವಿರುದ್ಧ ಹೋರಾಡುತ್ತಿದ್ದರೆ, ಇನ್ನೊಂದೆಡೆ ಲಾಕ್​ಡೌನ್​ ಪ್ರಯೋಜನ ಪಡೆದುಕೊಂಡು ಗುಜರಾತಿನ ದೇವಸ್ಥಾನವೊಂದರಲ್ಲಿ ನಕಲಿ ನೋಟುಗಳನ್ನು ತಯಾರಿಸಲಾಗುತ್ತಿದೆ ಎಂದು ಬರೆಯಲಾಗಿದೆ. ಹಾಗೆಯೇ ಇನ್​ಸ್ಟಾಗ್ರಾಂ ಖಾತೆಯನ್ನು ಫಾಲೋ ಮಾಡಿ ಎಂತಲೂ ಪೋಸ್ಟ್​ನಲ್ಲಿ ಕೇಳಿಕೊಳ್ಳಲಾಗಿದೆ.

    ಇದನ್ನೂ ಓದಿ: ಪಾಕ್ ಮಾಜಿ​ ಕ್ರಿಕೆಟರ್​ ಅಬ್ದುಲ್​ ರಜಾಕ್ ಮದುವೆಯಾಗಲಿದ್ದಾರಾ ತಮನ್ನಾ? ಮಿಲ್ಕಿ ಬ್ಯೂಟಿ ಹೇಳಿದ್ದೇನು?​

    ವೈರಲ್​ ಸುದ್ದಿಯ ಸತ್ಯಾಸತ್ಯತೆ ತಿಳಿಯಲು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಪೋಸ್ಟ್​ ನಕಲಿ ಹಾಗೂ ಅಪಪ್ರಚಾರ ನಡೆಸುವ ಉದ್ದೇಶದಿಂದ ಹರಿಬಿಡಲಾಗಿದೆ ಎಂದು ತಿಳಿದುಬಂದಿದೆ. ನಕಲಿ ನೋಟಿನ ಮುದ್ರಣ ಘಟನೆ ಕಳೆದ ವರ್ಷ ಗುಜರಾತಿನ ಸೂರತ್​ನಲ್ಲಿ ನಡೆದಿತ್ತು. ಆದರೆ, ಕರೊನಾ ವೈರಸ್​ ಲಾಕ್​ಡೌನ್​ಗೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.

    ಬೇಕಿದ್ದರೆ, ವೈರಲ್​ ಆಗಿರುವ ನಕಲಿ ಪೋಸ್ಟ್​ ಅನ್ನು ನೀವಿಲ್ಲಿ ಕಾಣಬಹುದಾಗಿದೆ. ಪೋಸ್ಟ್​ ಮಾಡಿದಾಗಿನಿಂದ ಈವರೆಗೂ 26 ಸಾವಿರಕ್ಕೂ ಹೆಚ್ಚು ಬಾರಿ ಶೇರ್​ ಆಗಿದೆ. ಅನೇಕ ಫೇಸ್​ಬುಕ್​ ಬಳಕೆದಾರರು ಇದೇ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡಿದ್ದಾರೆ.

    ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

    “ಜೀ ಬಿಹಾರ್​ ಜಾರ್ಖಂಡ್”​ ನ್ಯೂಸ್ ಚಾನಲ್​ನ 3 ನಿಮಿಷ 45 ಸೆಕೆಂಡಿನ ವಿಡಿಯೋ ಕ್ಲಿಪ್​ನಲ್ಲಿ ಗುಜರಾತಿನ ಸೂರತ್​ನಲ್ಲಿ ನಿರ್ಮಾಣ ಹಂತದಲ್ಲಿ ಇರುವ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಮುದ್ರಿಸಿ, ಹಂಚುತ್ತಿದ್ದ ಆರೋಪದಲ್ಲಿ ಓರ್ವ ಪೂಜಾರಿ ಸೇರಿ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಎಲ್ಲಿಯೂ ಇದು ಕರೊನಾ ವೈರಸ್​ ಲಾಕ್​ಡೌನ್​ಗೆ ಸಂಬಂಧಿಸಿದ್ದು ಎಂದು ಆ್ಯಂಕರ್​ ತಿಳಿಸಿಲ್ಲ.

    ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

    ಇದನ್ನೂ ಓದಿ: ಮಹಿಳಾ ಪಿಎಸ್​ಐಗೆ ಬೆದರಿಕೆಯೊಡ್ಡಿದ್ರಾ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ? ಮಂಗಳವಾರ ರಾತ್ರಿ ನಡೆದಿದ್ದೇನು?

    ಇದೇ ವಿಡಿಯೋ ತುಣುಕನ್ನು ಕಳೆದ ವರ್ಷದ ನವೆಂಬರ್​ 26ರಲ್ಲಿ ಫೇಸ್​ಬುಕ್​ ಬಳಕೆದಾರ ಪೋಸ್ಟ್​ ಮಾಡಿರುವುದು ಪತ್ತೆಯಾಗಿದ್ದು, ಕೀವರ್ಡ್ಸ್​ ಸಹಾಯದಿಂದ ಹುಡುಕಾಡಿದಾಗ ಘಟನೆ ಕುರಿತು ಅನೇಕ ಮಾಧ್ಯಮಗಳು ಹಾಗೂ ಪತ್ರಿಕೆಗಳು ವರದಿ ಮಾಡಿರುವುದು ಗಮನಕ್ಕೆ ಬಂದಿದೆ.

    ಮಾಧ್ಯಮ ಮತ್ತು ಪತ್ರಿಕಾ ವರದಿ ಪ್ರಕಾರ ಒಂದು ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪೂಜಾರಿ ಸೇರಿ ಐವರನ್ನು ಗುಜರಾತಿನ ಅಪರಾಧ ದಳದ ಪೊಲೀಸರು ಬಂಧಿಸಿದ್ದರು. ಸೂರತ್​ನ ಖೇದದಲ್ಲಿರುವ ಅಂಬವ್​ ಗ್ರಾಮದ ನಿರ್ಮಾಣ ಹಂತದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಘಟನೆ ನಡೆದಿತ್ತು.

    ಕೊನೆಯಲ್ಲಿ ತಿಳಿಯುವುದೇನೆಂದರೆ, ನಕಲಿ ನೋಟುಗಳನ್ನು ದೇವಸ್ಥಾನದಲ್ಲಿ ಸೀಜ್​ ಮಾಡಿರುವ ಘಟನೆ ಕಳೆದ ವರ್ಷದ್ದು, ಇಂದಿನ ಕರೊನಾ ಲಾಕ್​ಡೌನ್​ಗೂ ಇದಕ್ಕೂ ಸಂಬಂಧವಿಲ್ಲ ಎಂಬುದು ಮೇಲಿನ ನಿದರ್ಶನಗಳಿಂದ ತಿಳಿದುಬರುತ್ತದೆ. (ಏಜೆನ್ಸೀಸ್​)

    ಇದನ್ನೂ ಓದಿ: ಆಹಾರವೆಂದು ಸಿಡಿಮದ್ದು ತಿಂದ ಗರ್ಭಿಣಿ ಎಮ್ಮೆ ಬಾಯಿ ಛಿದ್ರ: ಮಾನವನ ಎಡವಟ್ಟಿಗೆ ಮೂಕ ಪ್ರಾಣಿಗೇಕೆ ಶಿಕ್ಷೆ?

    ಸದ್ಗುರು ಕಾರ್ಯಕ್ರಮ ಕರೊನಾ ಹರಡುವ ಹಾಟ್​ಸ್ಪಾಟ್​ ಆಯಿತೇ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ ಬಯಲು!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts