ಮುಂಬೈ: ದಕ್ಷಿಣ ಭಾರತದ ಪ್ರಖ್ಯಾತ ನಟಿ ತಮನ್ನಾ ಅವರು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಹಾದಿಯನ್ನು ಹಿಡಿಯಲಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಅಂದರೆ, ತಮನ್ನಾ ಅವರು ಪಾಕಿಸ್ತಾನಿ ಕ್ರಿಕೆಟರ್ ಒಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ.
ಹೌದು, ತಮನ್ನಾ ಅವರು ಪಾಕ್ ಮಾಜಿ ಕ್ರಿಕೆಟರ್ ಅಬ್ದುಲ್ ರಜಾಕ್ ಅವರನ್ನು ವರಿಸಲಿದ್ದಾರಂತೆ. ಹೀಗೊಂದು ಚರ್ಚೆ ಜಾಲತಾಣದಲ್ಲಿ ನಡೆಯುತ್ತಿದೆ. ಅದಕ್ಕೆ ಕಾರಣ ತಮನ್ನಾ ಹಾಗೂ ರಜಾಕ್ ಅವರು ಚಿನ್ನಾಭರಣ ಹಿಡಿದುಕೊಂಡು ಒಟ್ಟಿಗೆ ಪೋಸ್ ಕೊಟ್ಟಿರುವ ಫೋಟೋ ಕಾರಣವಾಗಿದೆ. ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ನಮಗಾಗಿ ನಿಂತೋಯ್ತು!
ಅಂದಹಾಗೆ ವೈರಲ್ ಫೋಟೋವನ್ನು 2017ರಲ್ಲಿ ಸೆರೆಹಿಡಿಯಲಾಗಿದೆ. ದುಬೈನಲ್ಲಿ ನಡೆದು ಜ್ಯುವೆಲ್ಲರಿ ಶಾಪ್ವೊಂದರ ಉದ್ಘಾಟನೆ ವೇಳೆ ತಮನ್ನಾ ಹಾಗೂ ರಜಾಕ್ ಪಾಲ್ಗೊಂಡಿದ್ದರು. ಇದೇ ಫೋಟೋ ಇದೀಗ ಕರೊನಾ ವೈರಸ್ ಲಾಕ್ಡೌನ್ ನಡುವೆ ವೈರಲ್ ಆಗಿದ್ದು, ಇಬ್ಬರು ಮದುವೆಯಾಗಲಿದ್ದಾರೆ ಎಂಬ ವದಂತಿಯನ್ನು ಹಬ್ಬಿಸಿದ್ದಾರೆ.
ತಮನ್ನಾ ಅವರಿನ್ನು ಫೋಟೋ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸದ್ಯ ಲಾಕ್ಡೌನ್ ಹಿನ್ನೆಲೆಯಲ್ಲಿ ಅವರು ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಈ ಹಿಂದೆ ಹಲವು ವದಂತಿಗಳ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಅಸಮಾಧಾನ ಹೊರಹಾಕಿದ್ದರು.
ಇದನ್ನೂ ಓದಿ: ‘ರಾಬರ್ಟ್’ ಬಿಡುಗಡೆ ಯಾವಾಗ? – ತರುಣ್ ಹೇಳುತ್ತಾರೆ ಕೇಳಿ …
ಒಂದು ದಿನ ಸಿನಿಮಾ ನಟನೊಂದಿಗೆ ನನ್ನನ್ನು ತಳುಕು ಹಾಕಿದರು. ಮತ್ತೊಂದು ದಿನ ಓರ್ವ ಕ್ರಿಕೆಟರ್ ಜತೆ ನನ್ನ ಹೆಸರು ಕೇಳಿಬಂತು. ಮತ್ತೊಂದು ದಿನ ತಮನ್ನಾ ಅವರು ವೈದ್ಯರೊಬ್ಬರನ್ನು ಮದುವೆಯಾಗಲಿದ್ದಾರೆ ಎಂದರು. ಇಂತಹ ವಂದತಿಗಳೆಲ್ಲ ಆಧಾರರಹಿತ ಎಂದು ಬೇಸರ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)