More

    ಆಂಧ್ರ ಅನಿಲ ದುರಂತ: ಸೋರಿಕೆಯಾಗಿರುವುದು ಸ್ಟೈರೀನ್ ಗ್ಯಾಸ್, ಇದರಿಂದಾಗುವ ದುಷ್ಪರಿಣಾಮಗಳೇನು?​

    ವಿಶಾಖಪಟ್ಟಣಂ: ಲಾಕ್​ಡೌನ್​ ನಡುವೆಯೂ ಘೋರ ದುರಂತವೊಂದಕ್ಕೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ. ಇಂದು(ಗುರುವಾರ) ಬೆಳಗ್ಗೆ ವಿಶಾಖಪಟ್ಟಣಂ ಜಿಲ್ಲೆಯ ಆರ್​. ಆರ್​. ವೆಂಕಟಪುರಂನ ಕೆಮಿಕಲ್​ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದಾಗಿ 9 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ.

    ಮೂಲಗಳ ಪ್ರಕಾರ ಕಾರ್ಖಾನೆಯಲ್ಲಿ ಸ್ಟೈರೀನ್ ಗ್ಯಾಸ್​ ಲೀಕ್​ ಆಗಿದೆ. ಇದರಿಂದಾಗಿಯೇ ಜನರಿಗೆ ಕಣ್ಣು, ಚರ್ಮ ಮತ್ತು ಮೂಗಿನಲ್ಲಿ ಉರಿ ಅನುಭವ ಕಾಣಿಸಿಕೊಂಡಿದ್ದು, ಉಸಿರಾಟದ ತೊಂದರೆಯು ಎದುರಾಗಿದೆ.

    ಇದನ್ನೂ ಓದಿ: ಲಾಕ್​ಡೌನ್​ ನಡುವೆ ಘೋರ ದುರಂತ: ಏರುತ್ತಲೇ ಇದೆ ವಿಷಾನಿಲ ಸೋರಿಕೆಯಿಂದ ಮೃತರಾದವರ ಸಂಖ್ಯೆ

    ಸ್ಟೈರೀನ್ ಗ್ಯಾಸ್​ ಎಂದರೇನು? ಯಾವುದಕ್ಕೆ ಬಳಸುತ್ತಾರೆ?
    ಸ್ಟೈರಿನ್​ ಗ್ಯಾಸ್​ ಒಂದು ಬಣ್ಣರಹಿತ ಸುಡುವ ದ್ರವವಾಗಿದ್ದು, ಇದು ಸುಲಭವಾಗಿ ಆವಿಯಾಗುತ್ತದೆ. ಇದನ್ನು ಪಾಲಿಸ್ಟೈರೀನ್​ ಪ್ಲ್ಯಾಸ್ಟಿಕ್​, ರಾಳ (ರೆಸಿನ್ಸ್​), ಫೈಬರ್​ಗ್ಲಾಸ್​, ರಬ್ಬರ್​ ಮತ್ತು ಲ್ಯಾಟೆಕ್ಸ್​ ತಯಾರಿಕೆಯಲ್ಲಿ ಬಳಸುತ್ತಾರೆ.

    ಸ್ಟೈರೀನ್ ಹೊಂದಿರುವ ಗ್ರಾಹಕ ಉತ್ಪನ್ನಗಳು
    ಪ್ಯಾಕೇಜಿಂಗ್​ ಮೆಟಿರೀಯಲ್ಸ್​, ವಿದ್ಯುತ್ ಬಳಕೆಗಾಗಿ ಇರುವ ಇನ್ಸುಲೇಶನ್​, ಮನೆ ಮತ್ತು ಇತರೆ ಕಟ್ಟಡಗಳ ಬಳಕೆಗಾಗಿ ಇರುವ ಇನ್ಸುಲೇಶನ್​, ಫೈಬರ್​, ಪ್ಲ್ಯಾಸ್ಟಿಕ್​ ಪೈಪ್ಸ್​, ಆಟೋಮೊಬೈಲ್​ ಬಿಡಿ ಭಾಗಗಳು, ಡ್ರಿಂಕಿಂಗ್​ ಕಪ್ಸ್​ ಹಾಗೂ ಇತರೆ ಆಹಾರ ಪದಾರ್ಥ ಬಳಸುವ ಸಾಮಾಗ್ರಿಗಳಲ್ಲಿ ಸ್ಟೈರಿನ್​ ಇರುತ್ತದೆ.

    ಇದನ್ನೂ ಓದಿ: ವಿಷ ಅನಿಲ ಸೋರಿಕೆ ದುರಂತ; ಗೃಹಸಚಿವಾಲಯ, ಎನ್​ಡಿಎಂಎ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಪ್ರಧಾನಿ

    ಸ್ಪೋಟಗೊಳ್ಳುವ ಸ್ಟೈರೀನ್ ಗ್ಯಾಸ್​ನಿಂದಾಗುವ ಪರಿಣಾಮಗಳು
    ಸೋರಿಕೆಯಾದ ಸ್ಟೈರೀನ್ ಗ್ಯಾಸ್​ ಮಾನವನನ್ನು ಸ್ಪರ್ಶಿಸಿದರೆ, ಉಸಿರಾಟದ ತೊಂದರೆ ಎದುರಾಗುತ್ತದೆ. ಕಣ್ಣು, ಮೂಗು ಹಾಗೂ ಚರ್ಮದಲ್ಲಿ ಉರಿ ಮತ್ತು ಜಠರಗರುಳಿನ ಸಮಸ್ಯೆ ಉಂಟಾಗುತ್ತದೆ. (ಏಜೆನ್ಸೀಸ್​)

    ಲಾಕ್​ಡೌನ್​ ಮಧ್ಯೆ ಗುಜರಾತ್​ನ ದೇವಸ್ಥಾನದಲ್ಲಿ ಕಂತೆ ಕಂತೆ ನಕಲಿ ನೋಟುಗಳು ವಶ? ಫ್ಯಾಕ್ಟ್​ಚೆಕ್​ನಲ್ಲಿ ಸತ್ಯಾಂಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts