ದೇವರ ಸಿನಿಮಾದ ಟಿಕೆಟ್​ ದರ ಹೆಚ್ಚಳ; ಸರ್ಕಾರ ಹೊರಡಿಸಿದ ಆದೇಶದಲ್ಲಿ ಏನಿದೆ?| Jr NTR Cinema Devara

Untitled-design-2024-09-22T160430.021
Published on

ಅಮರಾವತಿ: ಮಾಸ್‌ ಮ್ಯಾನ್‌ ಎನ್‌ಟಿಆರ್‌( Jr NTR ) ಅಭಿನಯಿಸಿರುವ ಕೊರಟಾಲ ಶಿವ ಬರೆದು ನಿರ್ದೇಶಿಸಿರುವ ಬಹು ನಿರೀಕ್ಷಿತ ಸಿನಿಮಾ(Cinema) ದೇವರ(Devara) ಇದೇ 27ರಂದು ಬಿಡುಗಡೆಯಾಗಲಿದೆ. ಚಿತ್ರ ರಿಲೀಸ್​ಗೂ ಮುನ್ನವೇ ಭಾರೀ ಹೈಪ್​ ಕ್ರಿಯೆಟ್​ ಮಾಡಿದೆ. ವಿಶ್ವದಾದ್ಯಂತ ರಿಲೀಸ್​ ಆಗುವ ಈ ಸಿನಿಮಾಕ್ಕೆ ಆಂಧ್ರಪ್ರದೇಶ ಸರ್ಕಾರವು ಬಂಪರ್​​ ಗಿಫ್ಟ್​ ನೀಡಿದೆ. ಇದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.

ಆಂಧ್ರಪ್ರದೇಶ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸಿನಿಮಾದ ಟಿಕೆಟ್​ ದರವನ್ನು ಹೆಚ್ಚಿಸಲಾಗಿದೆ. ಜತೆಗೆ ಮಧ್ಯರಾತ್ರಿ ಶೋಗಳಿಗೂ ಅನುಮತಿ ನೀಡಿದೆ. ಮಧ್ಯರಾತ್ರಿ ಶೋಗೆ ಅನುಮತಿಸಿರುವುದರಿಂದ ಯಂಗ್​ ಟೈಗರ್​ ಎನ್​ಟಿಆರ್ ಅಭಿಮಾನಿಗಳು ಸಂಭ್ರದಲ್ಲಿದ್ದಾರೆ. ಸರ್ಕಾರದ ಈ ಆದೇಶದ ಹಿನ್ನೆಲೆ ಜೂ.ಎನ್​​ ಟಿಆರ್ ಹಾಗೂ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಇದಕ್ಕಾಗಿ ಸಿಎಂ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್​​​ ಕಲ್ಯಾಣ್​ ಹಾಗೂ ಸಿನಿಮಾಟೋಗ್ರಫಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಲ್ಯಾಣ್ ರಾಮ್, ಚಲನಚಿತ್ರ ನಿರ್ಮಾಪಕ ಸೂರ್ಯದೇವರ ನಾಗವಂಶಿ ಮತ್ತು ಇತರರು ಸಿಎಂ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಸಿನಿಮಾಟೋಗ್ರಫಿ ಸಚಿವ ಕಂದುಲ ದುರ್ಗೇಶ್ ಅವರಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ.

ಹೆಚ್ಚಿಸಿರುವ ಟಿಕೆಟ್​​​ ದರದ ಬಗ್ಗೆ ನೋಡುವುದಾದರೆ, ಸಿಂಗಲ್ ಸ್ಕ್ರೀನ್‌ಗಳಲ್ಲಿ ಮೇಲ್ವರ್ಗದ 110 ರೂ. (ಜಿಎಸ್‌ಟಿ ಸೇರಿ), ಕೆಳವರ್ಗದ 60ರೂ.(ಜಿಎಸ್‌ಟಿ ಸೇರಿ) ಮತ್ತು ಮಲ್ಟಿಪ್ಲೆಕ್ಸ್ 135 ರೂ.(ಜಿಎಸ್‌ಟಿ ಸೇರಿ) ಹೆಚ್ಚಿಸಲು ಅವಕಾಶ ನೀಡಲಾಗಿದೆ. ಮತ್ತೊಂದೆಡೆ ತೆಲಂಗಾಣದಲ್ಲೂ ಸ್ಪೆಷಲ್ ಶೋಗಳಿಗೆ ಸರ್ಕಾರ ಗ್ರೀನ್​ಸಿಗ್ನಲ್​ ನೀಡಿದೆ ಎಂದು ವರದಿಗಳಿವೆ.

ಆಂಧ್ರಪ್ರದೇಶ ಸರ್ಕಾರ ನೀಡಿರುವ ಅನುಮತಿಯಲ್ಲಿ ದೇವರ ಸಿನಿಮಾವನ್ನು ಮಧ್ಯರಾತ್ರಿ 12 ಗಂಟೆಯ ಪ್ರದರ್ಶನದ ಜತೆಗೆ 6 ಶೋಗಳಿಗೆ ಅವಕಾಶ ನೀಡಲಾಗಿದೆ. ಈ ಸಿನಿಮಾವನ್ನು ಬಿಗ್​​ ಬಜೆಟ್​ನಲ್ಲಿ ನಿರ್ಮಿಸಲಾಗಿದ್ದು, ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಟ್ರೇಲರ್​, ಟೀಸರ್​​ ಹಾಗೂ ಹಾಡುಗಳಿಂದ ಹೈಪ್​ ಕ್ರಿಯೆಟ್​ ಮಾಡಿರುವ ಸಿನಿಮಾ ದೇವರ ಯಾವ ರೀತಿ ಕಮಾಲ್​ ಮಾಡಲಿದೆ ಎಂದು ಕಾದುನೋಡಬೇಕಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net