ಸಿನಿಮಾರಂಗಕ್ಕೆ ನಂದಮೂರಿ ಮೋಕ್ಷಜ್ಞ ಎಂಟ್ರಿ; ಜೂ.ಎನ್​​ಟಿಆರ್​ ಹೇಳಿದ್ದೇನು ಗೊತ್ತಾ?

ಹೈದರಾಬಾದ್​​: ಟಾಲಿವುಡ್​ ಸ್ಟಾರ್​ ಬಾಲಕೃಷ್ಣ ಪುತ್ರ ಮೋಕ್ಷಜ್ಞ ತೇಜ ನಟನೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಬಾಲಯ್ಯ ಅವರ ಉತ್ತರಾಧಿಕಾರಿ ನಂದಮೂರಿ ಮೋಕ್ಷಜ್ಞ ತೇಜ ಹುಟ್ಟುಹಬ್ಬದಂದು ಅವರ ಮೊದಲ ಚಿತ್ರದ ಫಸ್ಟ್​​ಲುಕ್​ ರಿವೀಲ್​ ಮಾಡಲಾಗಿದೆ. ಇದನ್ನು ಕಂಡ ನಂದಮೂರಿ ಫ್ಯಾನ್ಸ್​​​ ಫುಲ್​​ ಖುಷ್​ ಆಗಿದ್ದಾರೆ.

ಇದನ್ನು ಓದಿ: ‘IC 814- ದಿ ಕಂದಹಾರ್ ಹೈಜಾಕ್’ ಸಿರೀಸ್​ನಲ್ಲಿ ಮಹತ್ವದ ಬದಲಾವಣೆ; ಮೋನಿಕಾ ಶೆರ್ಗಿಲ್ ಸ್ಪಷ್ಟನೆ ಹೀಗಿದೆ..

ಮೋಕ್ಷಜ್ಞ ತೇಜ ಅವರ ಸಿನಿಮಾವನ್ನು ಹನುಮಾನ್ ಚಿತ್ರದ ಮೂಲಕ ಸೂಪರ್ ಹಿಟ್ ಗಳಿಸಿದ್ದ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ನಿರ್ದೇಶಿಸಲಿದ್ದಾರೆ. ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್​ ವರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿ ಸೆಲಿಬ್ರಿಟಿಗಳು ಮೋಕ್ಷಜ್ಞ ಹುಟ್ಟುಹಬ್ಬಕ್ಕೆ ಶುಭಹಾರೈಸುತ್ತಿದ್ದಾರೆ. ಇತ್ತೀಚೆಗಷ್ಟೇ ಮೋಕ್ಷಜ್ಞ ಸಿನಿಮಾ ಎಂಟ್ರಿ ಬಗ್ಗೆ ಜೂನಿಯರ್ ಎನ್​ಟಿಆರ್​ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದಾರೆ. ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡುತ್ತಿರುವ ಮೋಕ್ಷಜ್ಞಗೆ ಅಭಿನಂದನೆಗಳು. ಜೀವನದಲ್ಲಿ ಹೊಸ ಅಧ್ಯಾಯ ಪಾರಂಭಿಸುತ್ತಿರುವ ನಿಮಗೆ ದೇವರು ಹಾಗೂ ತಾತಾನವರು ಆಶೀರ್ವಾದ ನೀಡಲಿ. ಹ್ಯಾಪಿ ಬರ್ತ್​ಡೇ ಮೋಕ್ಷು ಎಂದು ಜೂನಿಯರ್​ ಎನ್​ಟಿಆರ್​ ವಿಶ್​ ಮಾಡಿದ್ದಾರೆ.

ಬಾಲಯ್ಯ ಅವರ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಜೂ.ಎನ್​ಟಿಆರ್​ ಗೈರಾಗಿದ್ದು ಹಾಗೂ ಟ್ವೀಟ್​ ಮಾಡಿ ಶುಭಾಶಯ ಕೋರದ ಕಾರಣ ನಂದಮೂರಿ ಕುಟುಂಬದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತಿತ್ತು. ಆದರೀಗ ಇದಕ್ಕೆ ಫುಲ್​ಸ್ಟಾಪ್​ ಇಡುವಂತೆ ಮೋಕ್ಷಜ್ಞ ಅವರ ಹುಟ್ಟುಹಬ್ಬದ ಸಮಯದಲ್ಲಿ ಅನೌನ್ಸ್​ ಮಾಡಲಾದ ಅವರ ಮೊದಲ ಸಿನಿಮಾಕ್ಕೆ ಎನ್​ಟಿಆರ್​ ಅಭಿನಂದಿಸಿದ್ದಾರೆ. ಈ ಒಂದು ಟ್ವೀಟ್​​ ಎನ್​ಟಿಆರ್​​ ಮತ್ತು ನಂದಮೂರಿ ಕುಟುಂಬದ ನಡುವೆ ಏನೋ ಸರಿಯಿಲ್ಲ ಎಂದು ಭಾವಿಸುತ್ತಿದ್ದವರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. (ಏಜೆನ್ಸೀಸ್​​)

ಅಭ್ಯರ್ಥಿ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಕ್ಕೆ ಗಳಗಳನೆ ಅತ್ತ ಮಾಜಿ ಶಾಸಕ

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…