ಚಂಡೀಗಢ: ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡಲು ಪಕ್ಷವು ನಿರಾಕರಿಸಿದರಿಂದ ಮಾಜಿ ಶಾಸಕರೊಬ್ಬರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಭ್ಯರ್ಥಿ ಪಟ್ಟಿಯಿಂದ ತನ್ನ ಹೆಸರನ್ನು ಹೊರಗಿಡಲಾಗಿದೆ ಎಂದು ಹೇಳುತ್ತಾ ಬಿಜೆಪಿ ಮಾಜಿ ಶಾಸಕ ಶಶಿ ರಂಜನ್ ಪರ್ಮಾರ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಓದಿ: ಕುಡಿದ ನಶೆಯಲ್ಲಿ ಪ್ರಯಾಣಿಕನ ಕಿರಿಕ್; ವಿಮಾನದಲ್ಲಿ ಮುಂದೇನಾಯ್ತು ನೀವೇ ನೋಡಿ
ವೈರಲ್ ವಿಡಿಯೋದಲ್ಲಿ ಅಭ್ಯರ್ಥಿ ಪಟ್ಟಿಯಿಂದ ಅವರನ್ನು ಹೊರಗಿಟ್ಟಿರುವ ಬಗ್ಗೆ ಪ್ರಶ್ನೆ ಕೇಳುವುದನ್ನು ಕಾಣಬಹುದಾಗಿದೆ. ಅದಕ್ಕೆ ಉತ್ತರಿಸುವಾಗ ಸೀಟು ನಿರಾಕರಿಸಿದ ಬಗ್ಗೆ ಪರ್ಮಾರ್ ತಮ್ಮ ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ಭಿವಾನಿ ಮತ್ತು ತೋಷಂ ಕ್ಷೇತ್ರಗಳಿಂದ ಸ್ಪರ್ಧಿಸಲು ಅರ್ಹತೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಪಕ್ಷದಿಂದ ಬಿಡುಗೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಪಕ್ಷ ನನ್ನ ಹೆಸರು ಕೈಬಿಟ್ಟಿರುವುದು ಅನಿರೀಕ್ಷಿತ. ಪಕ್ಷದ ನಿರ್ಧಾರದಿಂದ ಬೇಸರವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ. ಅವರಿಗೆ ಸಾಂತ್ವನ ಹೇಳಲು ಪ್ರಯತ್ನಿಸಿದಾಗ ನಾನೇ ಅಭ್ಯರ್ಥಿಯಾಗುತ್ತೇನೆ ಎಂದು ಜನರಿಗೆ ಭರವಸೆ ನೀಡಿದ್ದೆ. ನಾನೀಗ ಏನು ಮಾಡಬೇಕು? ನಾನು ಅಸಹಾಯಕನಾಗಿದ್ದೇನೆ ಎಂದು ಹೇಳಿದ್ದಾರೆ.
ಖಾಸಗಿ ಸಂದರ್ಶನದ ವೇಳೆ ಈ ಘಟನೆ ನಡೆದಿದ್ದು, ಸಂದರ್ಶನ ಮಾಡುತ್ತಿದ್ದವರು ಪಕ್ಷದ ಕಾರ್ಯಕರ್ತರು ಹಾಗೂ ಜನರಿಗಾಗಿ ನೇತಾಜಿ, ಆಪ್ ಹೊಂಸ್ಲಾ ರಖೇನ್ (ಸರ್, ದಯವಿಟ್ಟು ಗಟ್ಟಿಯಾಗಿರಿ) ಎಂದು ಹೇಳುತ್ತಾರೆ. ಆದರೆ ಪರ್ಮಾರ್ ಅವರು ನಿರಾಸೆಯನ್ನು ವ್ಯಕ್ತಪಡಿಸಿ ನನಗೆ ಏನಾಗುತ್ತಿದೆ … ಅವರು ನನ್ನನ್ನು ಏಕೆ ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಅವರ ನಿರ್ಧಾರದಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.
ಅಂದ್ಹಾಗೆ ರಾಜ್ಯದ ಭಿವಾನಿ ಮತ್ತು ತೋಷಮ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪರ್ಮಾರ್ ಆಸಕ್ತಿ ಹೊಂದಿದ್ದರು. ಆದರೆ ರಾಜ್ಯಸಭಾ ಸಂಸದ ಕಿರಣ್ ಚೌಧರಿ ಅವರ ಪುತ್ರಿ ಶ್ರುತಿ ಚೌಧರಿ ಅವರಿಗೆ ತೋಷಮ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲಾಗಿದೆ. ಹರಿಯಾಣದಲ್ಲಿ ಅಕ್ಟೋಬರ್ 5ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳನ್ನು ಸಲ್ಲಿಸಲು ಸೆಪ್ಟೆಂಬರ್ 12 ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 13ರಂದು ದಾಖಲೆ ಪರಿಶೀಲನೆ ನಡೆಯಲಿದ್ದು, ಸೆಪ್ಟೆಂಬರ್ 16 ರೊಳಗೆ ನಾಮಪತ್ರ ಹಿಂಪಡೆಯಬಹುದು.(ಏಜೆನ್ಸೀಸ್)
ಪತಿ ಸೇರಿ 50 ಪುರುಷರಿಂದ ಅತ್ಯಾಚಾರ; ಕೋರ್ಟ್ನಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಮಹಿಳೆ..