More

    ವಾರ್​-2 ಸಿನಿಮಾದಲ್ಲಿ ನಟನೆ; 30 ಕೋಟಿ ರೂ. ಸಂಭಾವನೆ ಪಡೆದುಕೊಂಡ್ರಾ ಜೂ.ಎನ್​ಟಿಆರ್?

    ನವದೆಹಲಿ: ನಟ ಜೂನಿಯರ್ ಎನ್‌ಟಿಆರ್ ‘ವಾರ್-2’ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲು ಬರೋಬ್ಬರಿ 30 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ‘ವಾರ್ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅಯಾನ್ ಮುಖರ್ಜಿ ನಿರ್ದೇಶನ ಮಾಡುತ್ತಿದ್ದಾರೆ.

    ಇದನ್ನೂ ಓದಿ: ದಿ ಕೇರಳ ಸ್ಟೋರಿ ಸಿನಿಮಾಗೆ ಉತ್ತರ ಪ್ರದೇಶ ಬೆಂಬಲ: ತೆರಿಗೆ ವಿನಾಯಿತಿ ಘೋಷಿಸಿದ ಸರ್ಕಾರ

    ಜೂ.ಎನ್​ಟಿಆರ್ ವಾರ್-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲ ತಿಂಗಳುಗಳ ಹಿಂದೆ ಹೊರಬಿದ್ದಿತ್ತು. ಈ ಮೂಲಕ ಅಧಿಕೃತವಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಂತೆ ಆಗಿತ್ತು. ಇದೀಗ ಈ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: 3 ದಿನ 35 ಕೋಟಿ ರೂ.; ಬಾಯ್ಕಾಟ್​ಗೆ ಬಗ್ಗದ, ಬ್ಯಾನ್​ಗೆ ಜಗ್ಗದ ‘ದಿ ಕೇರಳ ಸ್ಟೋರಿ’

    ಹೃತಿಕ್ ರೋಷನ್ ಜತೆಗೆ ಜೂ.ಎನ್‌ಟಿಆರ್ ನಟಿಸುತ್ತಿರುವ ವಾರ್-2 ಸಿನಿಮಾ ಅದ್ಧೂರಿಯಾಗಿ ನಿರ್ಮಾಣವಾಗಲಿದ್ದು, ಸಾಹಸಮಯ ಸಿನಿಮಾ ಇದಾಗಿರಲಿದೆ. 2019ರಲ್ಲಿ ತೆರೆಕಂಡಿದ್ದ ‘ವಾರ್’ ಸಿನಿಮಾಗೆ ಆದಿತ್ಯ ಚೋಪ್ರಾ ಬಂಡವಾಳ ಹೂಡಿದ್ದರು. ಇದರಲ್ಲಿ ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟಿಸಿದ್ದರು. ಆದರೆ, ‘ವಾರ್-2’ರಲ್ಲಿ ಹೃತಿಕ್ ಜತೆಯಾಗಿ ಜೂ.ಎನ್‌ಟಿಆರ್ ತೆರೆ ಹಂಚಿಕೊಳ್ಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts