ಸಿನಿಮಾ

ಬಹುನಿರೀಕ್ಷಿತ ಆದಿಪುರುಷ್ ಚಿತ್ರದ ಟ್ರೈಲರ್​ ಬಿಡುಗಡೆ: ಫ್ಯಾನ್ಸ್​ ಪುಲ್​ ಖುಷ್​

ಹೈದರಾಬಾದ್​: 2023ರ ಬಹುನಿರೀಕ್ಷಿತ ಚಿತ್ರವೆಂದು ಪರಿಗಣಿಸಲಾಗಿರುವ ಆದಿಪುರುಷ್​ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ. 3ಡಿಯಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಫ್ಯಾನ್ಸ್​ ಜತೆಗೆ ಚಿತ್ರತಂಡವು ಖುಷಿಪಟ್ಟಿದೆ.

ಈ ಹಿಂದೆ ಟೀಸರ್​ ಬಿಡುಗಡೆಯಾಗಿದ್ದ ವೇಳೆ ಕಳಪೆ ಗ್ರಾಫಿಕ್ಸ್​​ ಕಾರಣದಿಂದ, ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಒಳಗಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಚಿತ್ರ ತಂಡ, ಸಾಕಷ್ಟು ಬದಲಾವಣೆ ಮಾಡಿ ಟ್ರೇಲರ್​ ನೈಜವಾಗಿ ಮೂಡಿ ಬರುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಕೇರಳ ಸ್ಟೋರಿ ಚಿತ್ರ ನಿರ್ಮಾಪಕನಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕು: ಎನ್​ಸಿಪಿ ನಾಯಕ

ಈ ಚಿತ್ರವು ಕನ್ನಡವೂ ಸೇರಿ ಹಿಂದಿ, ಮಲಯಾಳಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದ್ದು, ಬರುವ ಜೂನ್​ 16ಕ್ಕೆ ಬಿಡುಗಡೆಯಾಗಲಿದೆ. ಚಿತ್ರದ ತಾರಾಗಣದಲ್ಲಿ ನಟ ಪ್ರಭಾಸ್, ಸೈಫ್​ ಅಲಿ ಖಾನ್​ ಹಾಗೂ ನಟಿ ಕೃತಿ ಸನೂನ್​ ಪ್ರಮುಖ ಪಾತ್ರದಲ್ಲಿದ್ದಾರೆ.

ಪೌರಾಣಿಕ ಕಥೆಯಾಧಾರಿತ ಆದಿಪುರುಷ್​ ಚಿತ್ರವನ್ನು ​ಓಂರಾವತ್​ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರತಂಡವು ಪ್ರಚಾರಕ್ಕಾಗಿ ತಯಾರಿ ಮಾಡಿಕೊಂಡಿದ್ದು, ಅಭಿಮಾನಿಗಳು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.(ಏಜೆನ್ಸೀಸ್​)

Latest Posts

ಲೈಫ್‌ಸ್ಟೈಲ್