ರಿ-ರಿಲೀಸ್​ಗೆ ಸಜ್ಜಾಯ್ತು ಜೂ. ಎನ್​ಟಿಆರ್​ ಸಿನಿಮಾ; 400 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಟೀಸರ್​!

Untitled design - 2023-10-18T190111.610
Published on

ಆಂಧ್ರಪ್ರದೇಶ: ಶಿವ ಕೊರಟಾಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್​ ಇಂಡಿಯಾ ಆ್ಯಕ್ಷನ್​ ಜಾನರ್​ನ 'ದೇವರ' ಚಿತ್ರ ಸದ್ಯ ಚಿತ್ರೀಕರಣ ಹಂತದಲ್ಲಿದ್ದು, ಈ ಚಿತ್ರ ಮುಂದಿನ ವರ್ಷ ಏಪ್ರಿಲ್​ 5, 2024 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.

ಈ ಮಧ್ಯೆ ಜೂ. ಎನ್​​ಟಿಆರ್​ ಅಭಿನಯದ ಬ್ಲಾಕ್‌ಬಸ್ಟರ್ ಕಾಮಿಡಿ ಚಲನಚಿತ್ರ 'ಅಧುರ್ಸ್' ಇದೇ ನವೆಂಬರ್ 18 ರಂದು ಅದ್ದೂರಿ ಮರು ಬಿಡುಗಡೆಗೆ ಸಿದ್ಧವಾಗಿದೆ. ಇದರೊಟ್ಟಿಗೆ ಈ ಚಿತ್ರದ ಟೀಸರ್​ ಅನ್ನು ಎನ್​ಟಿಆರ್​ ಅವರ ಬೃಹತ್ ಸಂಖ್ಯೆಯ​ ಅಭಿಮಾನಿಗಳಿಗೆ ತೋರಿಸಲು ಚಿತ್ರತಂಡ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ನಿರ್ಧರಿಸಿದೆ. ಗುರುವಾರ (ಅ.19) ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಾದ್ಯಂತ ಈ ಟೀಸರ್​ ಅನಾವರಣಗೊಳ್ಳಲಿದೆ.

ಚಿತ್ರದಲ್ಲಿ ನಯನತಾರಾ ಮತ್ತು ಶೀಲಾ ಕೌರ್ ಮಹಿಳಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಸಯಾಜಿ ಶಿಂಧೆ, ನಾಸರ್, ತನಿಕೆಲ್ಲ ಭರಣಿ ಸೇರಿದಂತೆ ಹಲವು ಪ್ರತಿಭಾವಂತ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net