ಮುಂಬೈ: ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಮತ್ತು ಹಾಲಿವುಡ್ ನಟ ಜಾನ್ ಸೀನಾ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದು ಎಲ್ಲರಿಗೂ ಗೊತ್ತೇ ಇದೆ. ಜುಲೈನಲ್ಲಿ ನಡೆದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಸಮಾರಂಭದಲ್ಲಿ ಜಾನ್ ಸೀನಾ ಭಾಗವಹಿಸಿದ್ದರು. ಈ ವೇಳೆ ಅವರು ಭಾರತೀಯ ಉಡುಗೆಯಲ್ಲಿ ಮಿಂಚಿದರು.
ಮದುವೆಯ ಸಂದರ್ಭದಲ್ಲಿ ಅನೇಕ ಬಾಲಿವುಡ್ ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳನ್ನು ಜಾನ್ ಸೀನಾ ಭೇಟಿಯಾದರು. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜತೆ ಬಹಳ ಹೊತ್ತು ಮಾತನಾಡಿಸಿದರು. ಈ ವೇಳೆ ಶಾರುಖ್ ಮಾತುಗಳಿಂದ ಹೇಗೆ ಸ್ಫೂರ್ತಿಗೊಂಡೆನು ಎಂಬುದನ್ನು ಜಾನ್ ಸೀನಾ ವಿವರಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮ ಎಎನ್‌ಐ ಜತೆ ಮಾತನಾಡಿರುವ ಜಾನ್ ಸೀನಾ, ಶಾರುಖ್ ಖಾನ್ ಅವರನ್ನು ಭೇಟಿಯಾದ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ನಿಮ್ಮ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರುವ ವ್ಯಕ್ತಿಯ ಕೈ ಕುಲುಕಲು ಮತ್ತು ಅವರು ಏನು ಮಾಡಿದ್ದಾರೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗುವಂತಹ ಕ್ಷಣ ತುಂಬಾ ಭಾವನಾತ್ಮಕವಾದದ್ದು, ಅವರೊಂದು ಅದ್ಭುತ. ಸಹಾನುಭೂತಿಯುಳ್ಳವರು ಎಂದು ಕೊಂಡಾಡಿದ್ದಾರೆ.
ನನ್ನ ಜೀವನದಲ್ಲಿ ಸರಿಯಾದ ಸಮಯದಲ್ಲಿ ಆ ಮಾತುಗಳನ್ನು ಕೇಳಿದೆ. ಶಾರುಖ್ ಅವರು ತಮ್ಮ ಮಾತುಗಳಿಂದ ನನಗೆ ತುಂಬಾ ಸ್ಫೂರ್ತಿ ನೀಡಿದರು. ಅವರ ಮಾತುಗಳು ನನ್ನ ಜೀವನವನ್ನು ತುಂಬಾ ಬದಲಾಯಿಸಿದೆ. ಅಂದಿನಿಂದ ನನ್ನ ಮುಂದಿರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಯಿತು. ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎಂದು ಜಾನ್ ಸೀನಾ ಹೇಳಿದ್ದಾರೆ.
ಅಂದಹಾಗೆ ಜಾನ್ ಸೀನಾ ಭಾರತೀಯ ಪಾಕಪದ್ಧತಿಗೆ ಫಿದಾ ಆಗಿದ್ದಾರೆ. ಅಂಬಾನಿ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬಗೆ ಬಗೆಯ ಖಾದ್ಯಗಳನ್ನು ಬಡಿಸಲಾಗಿತ್ತು. ಭಾರತೀಯ ಪಾಕಪದ್ಧತಿ ಅದ್ಭುತವಾಗಿದೆ. ಆದರೆ ನಾನು ಭಾರತದಲ್ಲಿ ಸ್ವಲ್ಪ ಸಮಯ ಮಾತ್ರ ಇದ್ದೆ. ಹೀಗಾಗಿ ಎಲ್ಲವನ್ನು ಸವಿಯಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಭೇಟಿ ನೀಡಿ ಹೆಚ್ಚು ಭಾರತೀಯ ಪಾಕಪದ್ಧತಿಯನ್ನು ಸವಿಯಲು ಬಯಸುತ್ತೇನೆ. ಮಸಾಲೆ ಮತ್ತು ಮೆಣಸಿನಕಾಯಿ ಬೆವರಿಳಿಸಿತು. ಶೀಘ್ರದಲ್ಲೇ ನಾನು ಭಾರತಕ್ಕೆ ಬರಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಅಂದರೆ ಅನಂತ್ ಮತ್ತು ರಾಧಿಕಾ ವಿವಾಹ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಜಾನ್ ಸೀನಾ ಅವರು ಶಾರುಖ್ ಜತೆಗಿನ ಚಿತ್ರವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ಅತಿವಾಸ್ತವಿಕವಾದ 24 ಗಂಟೆಗಳು ಎಂದು ಬರೆದುಕೊಂಡಿದ್ದರು. ಅಲ್ಲದೆ, ಅಂಬಾನಿ ಕುಟುಂಬದ ಸಾಟಿಯಿಲ್ಲದ ಆತಿಥ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಶಾರುಖ್ ಭೇಟಿ ಸೇರಿದಂತೆ ಹಲವಾರು ಮರೆಯಲಾಗದ ಕ್ಷಣಗಳಿಂದ ತುಂಬಿತ್ತು ಮತ್ತು ಹೊಸ ಸ್ನೇಹಿತರನ್ನು ಸಂಪರ್ಕಿಸಲು ಈ ವಿವಾಹ ಸಮಾರಂಭ ನನಗೆ ಅವಕಾಶ ಮಾಡಿಕೊಟ್ಟಿತು ಎಂದು ಶಾರುಖ್ ಬರೆದುಕೊಂಡಿದ್ದರು. (ಏಜೆನ್ಸೀಸ್)
A surreal 24 hours. So grateful for the Ambani family for their unmatched warmth and hospitality.
An experience filled with so many unforgettable moments which allowed me to connect with countless new friends, including meeting @iamsrk and being able to tell him personally the… pic.twitter.com/MNRb29cFuV
— John Cena (@JohnCena) July 13, 2024
ಮನೆಯ ಒಳಗೆ ಪಾಕ್ ಪರ ಬರಹ! ದೆಹಲಿ ಪೊಲೀಸರ ಬಲೆಗೆ ಬಿದ್ದ ವ್ಯಕ್ತಿಯ ಹಿನ್ನೆಲೆ ಹೀಗಿದೆ…
ಸುಪ್ರೀಂಕೋರ್ಟ್ ತೀರ್ಪು: ಲೆಫ್ಟಿನೆಂಟ್ ಗವರ್ನರ್ ಜತೆಗಿನ ಜಗಳದಲ್ಲಿ ಎಎಪಿಗೆ ತೀವ್ರ ಮುಖಭಂಗ