ಡಿಸೆಂಬರ್​ 1ಕ್ಕೆ ಕೋರ್ಟ್​ಗೆ ಹಾಜರಾಗಬೇಕಂತೆ ಸಲ್ಮಾನ್​ ಖಾನ್​!

Salman Khan - Final
Published on

ಜೋಧಪುರ: ಜೋಧಪುರ್​ನ ಜಿಲ್ಲಾ ಸೆಷನ್ಸ್​ಕೋರ್ಟ್​, ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರಿಗೆ ಕೃಷ್ಣಮೃಗ ಬೇಟೆ ಪ್ರಕರಣದ ಹಿನ್ನೆಲೆಯಲ್ಲಿ ಡಿಸೆಂಬರ್​ ಒಂದರಂದು ಕೋರ್ಟ್​ಗೆ ಹಾಜರಾಗುವುದಕ್ಕೆ ತಿಳಿಸಿದೆ.

ಇದಕ್ಕೂ ಮುನ್ನ , ಇದರ ವಿಚಾರಣೆಯನ್ನು ಕೋರ್ಟ್​ ಮುಂದೂಡಿತ್ತು. ಮುಂದಿನ ವಿಚಾರಣೆ ವೇಳೆಗೆ ಸಲ್ಮಾನ್​ ಖುದ್ದು ಹಾಜರಿ ಇರಬೇಕೆಂದು ನ್ಯಾಯಾಧೀಶರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್​ ಒಂದರಂದು ಸಲ್ಮಾನ್​ ಖಾನ್​ ಹಾಜರಾಗಬೇಕಿದೆ.

ಸುಮಾರು 22 ವರ್ಷಗಳ ಹಿಂದೆ, 'ಹಮ್​ ಸಾಥ್​ ಸಾಥ್​ ಹೈ' ಚಿತ್ರದ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆಯುವ ಸಂದರ್ಭದಲ್ಲಿ, ಸಲ್ಮಾನ್​ ಸೇರಿದಂತೆ ಕಲವು ನಟ-ನಟಿಯರು ಕೃಷ್ಣಮೃಗ ಬೇಟೆಯಾಡಿದ್ದರು.

ಈ ಸಂಬಂಧ, ಜೋಧಪುರದ ನ್ಯಾಯಾಲಯವು ಸಲ್ಮಾನ್​ ಖಾನ್​ ಅವರಿಗೆ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು. ಅವರ ಜತೆಗೆ ಈ ಬೇಟೆಯಲ್ಲಿ ಹಾಜರಿದ್ದ ಸೈಫ್​ ಅಲಿ ಖಾನ್​, ನೀಲಂ, ತಾಬು, ಸೋನಾಲಿ ಬೇಂದ್ರೆ ಮುಂತಾದವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net