ಅವ್ರು ನನ್ನ ಸಾಯಿಸ್ತಾರೆ ಅಂತ ಭಯವಾಗ್ತಿದೆ ... ಸುಶಾಂತ್​ ಹೀಗೆ ಮೆಸೇಜ್​ ಕಳಿಸಿದ್ದು ಯಾಕೆ?

Sushant Singh Rajaput - Final
Published on

ಮುಂಬೈ: ಸುಶಾಂತ್​ ಸಿಂಗ್ ರಜಪೂತ್​ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಲೇ ಇದೆ. ಆದರೆ, ಇದಕ್ಕೆ ಪುಷ್ಠಿ ನೀಡುವ ಅಂಶಗಳು ಇದುವರೆಗೂ ಸಿಕ್ಕಿಲ್ಲ. ಸಿಬಿಐನವರು ಸಹ ಸುಶಾಂತ್​ ಅವರದ್ದು ಕೊಲೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಹೇಳಿದ್ದಾರೆ.

ಹೀಗಿರುವಾಗಲೇ, ಸುಶಾಂತ್​ ತಮ್ಮ ಸಹೋದರಿಗೆ ಕಳಿಸಿದ್ದಾರೆನ್ನಲಾದ ಎಸ್​.ಎಂ.ಎಸ್​ವೊಂದು ಇದೀಗ ಬಹಿರಂಗಗೊಂಡಿದೆ. ಮೂಲಗಳ ಪ್ರಕಾರ, ಸುಶಾಂತ್​ ಅವರು ತಮ್ಮ ಸಹೋದರಿ ಮೀತು ಸಿಂಗ್​ಗೆ ಜೂನ್​ 9ರಂದು ಒಂದು ಎಸ್​.ಎಂ.ಎಸ್​ ಕಳಿಸಿದ್ದರಂತೆ.

ಅದರ ಹಿಂದಿನ ದಿನವಷ್ಟೇ, ಸುಶಾಂತ್​ ಅವರ ಮ್ಯಾನೇಜರ್​ ಆದ ದಿಶಾ ಸಾಲಿಯಾನ್​ ಅವರ ಮರಣವಾಗಿತ್ತು. ಅದು ಆತ್ಮಹತ್ಯೆ ಎಂದು ಹೇಳಲಾಗಿತ್ತು. ಅದರ ಮರುದಿನವೇ ಸುಶಾಂತ್​ ತಮ್ಮ ಸಹೋದರಿಗೆ, 'ಇವರೆಲ್ಲಾ ನನ್ನ ಸಾಯಿಸಿಬಿಡ್ತಾರೆ ಅಂತ ನನಗೆ ಬಹಳ ಭಯವಾಗ್ತಿದೆ' ಎಂದು ಸುಶಾಂತ್​ ಮೆಸೇಜ್​ ಹಾಕಿದ್ದರಂತೆ.

ಅಷ್ಟೇ ಅಲ್ಲ, ಈ ವಿಷಯವಾಗಿ ರಿಯಾ ಚಕ್ರವರ್ತಿಯನ್ನು ಸಂಪರ್ಕಿಸುವುದಕ್ಕೆ ಪ್ರಯತ್ನಿಸುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದರಂತೆ. ರಿಯಾ ಜತೆಗೆ ತುರ್ತಾಗಿ ಕೆಲವು ವಿಷಯಗಳನ್ನು ಮಾತನಾಡುಬೇಕಿತ್ತಾದರೂ, ಅವರು ಪ್ರತಿಕ್ರಿಯಿಸುತ್ತಿಲ್ಲ ಎಂದು ಸುಶಾಂತ್ ಮೆಸೇಜ್​ ಮಾಡಿದ್ದರಂತೆ.

ಈ ವಿಷಯ ಇದೀಗ ಬೆಳಕಿಗೆ ಬಂದಿದ್ದು, ಇದರಿಂದ ಪ್ರಕರಣ ಯಾವ ರೀತಿ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net