ನಟ ಸತೀಶ್ ನೀನಾಸಂ ನೈಟ್​ ಡ್ಯೂಟಿ ಹೇಗಿರುತ್ತೆ?; ಇಲ್ಲಿದೆ ನೋಡಿ ವಿಡಿಯೋ...

SathishNinasam
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟ ಸತೀಶ್ ನೀನಾಸಂ ಇನ್ನೇನು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಅಷ್ಟೇ ಅಲ್ಲ ಜಿಮ್​ನಲ್ಲಿ ಬೆವರಿಳಿಸಿ ಮೈ ಹುರಿಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೂ ಮುನ್ನ ನೈಟ್​ ಡ್ಯೂಟಿ ಸಹ ಮಾಡುತ್ತಿದ್ದಾರೆ. ಹೌದು, ನಿತ್ಯ ಮನೆಬಳಿಯ ಹಲವು ಸ್ನೇಹಿತರ ಜತೆಗೆ ಒಂದಷ್ಟು ಹೊತ್ತು ಸತೀಶ್​ ಕಾಲಕಳೆಯುತ್ತಾರೆ. ಮಾತು ಬಾರದ ಮುಗ್ದ ಶ್ವಾನಗಳಿಗೆ ಆಹಾರ ನೀಡಿ, ಅವುಗಳ ಹಸಿವು ನೀಗಿಸುತ್ತಿದ್ದಾರೆ. ಹಾಗೇ ಅವುಗಳ ಜತೆ ಕಾಲ ಕಳೆದ ವಿಡಿಯೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು, ನೈಟ್​ ಡ್ಯೂಟಿ ಎಂಬ ಕ್ಯಾಪ್ಶನ್​ ನೀಡಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net