More

    ದೀಪಿಕಾ ಪಡುಕೋಣೆ ಡಿಪ್ರೆಷನ್​ಗೆ ಕಾರಣ ಹುಡುಕಿದ ಕಂಗನಾ ರಣಾವತ್!

    ಮುಂಬೈ: ಡ್ರಗ್ಸ್​ ಮಾಫಿಯಾ ಪ್ರಕರಣಕ್ಕೆ ನಟಿ ದೀಪಿಕಾ ಪಡುಕೋಣೆ ಹೆಸರು ತಳುಕು ಹಾಕಿಕೊಳ್ಳುತ್ತಿರುವಂತೆಯೇ ಮತ್ತೊಬ್ಬ ನಟಿ ಕಂಗನಾ ರಣಾವತ್, ದೀಪಿಕಾ ಡಿಪ್ರೆಷನ್​ಗೆ ಕಾರಣ ಏನು ಎಂಬುದನ್ನು ಹುಡುಕಿದ್ದಾರೆ.

    ಡ್ರಗ್ಸ್​ ಚಟದಿಂದಾಗಿಯೇ ದೀಪಿಕಾ ಡಿಪ್ರೆಷನ್​ಗೆ ಒಳಗಾಗಿದ್ದಾರೆ ಎಂಬರ್ಥದಲ್ಲಿ ಕಂಗನಾ ಹರಿಹಾಯ್ದಿದ್ದಾರೆ. “ಡ್ರಗ್ಸ್​ ಚಟದ ಪರಿಣಾಮವೇ ಡಿಪ್ರೆಷನ್​. ಸೋ ಕಾಲ್ಡ್​ ಹೈ ಸೊಸೈಟಿಯ ಶ್ರೀಮಂತ ಸ್ಟಾರ್ ಪುತ್ರಿ, ತನ್ನನ್ನು ತಾನೇ ಕ್ಲಾಸ್​ ಎಂದು ಹೇಳಿಕೊಂಡು, ಒಳ್ಳೆಯ ರೀತಿಯಲ್ಲಿ ಬೆಳೆದಿದ್ದೇನೆ ಎಂದುಕೊಂಡಿರುವಳು ಆಕೆಯ ಮ್ಯಾನೇಜರ್ ಬಳಿ ‘ಮಾಲ್​ ಹೈ ಕ್ಯಾ?’ ಕೇಳುತ್ತಾಳೆ” ಎಂದು ಕಂಗನಾ ದೀಪಿಕಾ ಪಡುಕೋಣೆಯನ್ನು ಟೀಕಿಸಿದ್ದಾರೆ.

    ಡ್ರಗ್ಸ್​ ಜತೆ ದೀಪಿಕಾ ಹೆಸರು ಕೇಳಿ ಬರುತ್ತಿದ್ದಂತೆ ಬಾಲಿವುಡ್​ಗೆ ಸಂಬಂಧಿಸಿದಂತೆ ಹಲವರು ಡಿಪ್ರೆಷನ್​ ಬಗ್ಗೆ ಮಾತನಾಡಲು ಆರಂಭಿಸಿದ್ದು, ಆ ಮೂಲಕವೇ ದೀಪಿಕಾ ಕಾಲೆಳೆಯಲು ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts