ಬಾವಿಗೆ ಬಿದ್ದು ಜ್ಯುವೆಲ್ಲರಿ ಮಾಲೀಕ ಮೃತ್ಯು

Suicide
Published on

ಕಾಸರಗೋಡು: ಮಂಗಲ್ಪಾಡಿ ಪ್ರತಾಪನಗರ ನಿವಾಸಿ, ವಿಶ್ವನಾಥ ಆಚಾರ್ಯ(52) ಎಂಬುವರು ಮನೆಯ ಬಾವಿಗೆ ಬಿದ್ದಿದ್ದು, ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಮೃತಪಟ್ಟಿದ್ದಾರೆ. ಆಯತಪ್ಪಿ ಬಾವಿಗೆ ಬಿದ್ದಿದ್ದರೆನ್ನಲಾಗಿದೆ. ಚೆರುಗೋಳಿಯಲ್ಲಿ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದು, ಉಪ್ಪಳ ಕೈಕಂಬದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್ ಅಪ್ರೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಪ್ರತಾಪನಗರ ಶ್ರೀಗೌರೀಗಣೇಶ ಭಜನಾಮಂದಿರದಲ್ಲಿ ಸಕ್ರಿಯರಾಗಿದ್ದು, ಉತ್ತಮ ಭಜನಾಸಂಕೀರ್ತನಕಾರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net