More

    ಭೋಗಾಪುರದಲ್ಲಿ ಜೆಟ್ ವಿಮಾನ ಪತನ; ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರು

    ಚಾಮರಾಜನಗರ: ತಾಲೂಕಿನ ಭೋಗಾಪುರ -ಮೂಕಳ್ಳಿ ಗ್ರಾಮದ ಬಳಿ ಜೆಟ್ ವಿಮಾನ ಪತನವಾಗಿದೆ. ಪ್ಯಾರಾಚೂಟ್ ಬಳಸಿ ಇಬ್ಬರು ಪೈಲಟ್​ಗಳು ವಿಮಾನದಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.

    ಗ್ರಾಮದ ಮುಖ್ಯರಸ್ತೆಯ ಸಮೀಪದ ಖಾಲಿ ಜಮೀನಿನಲ್ಲಿ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಲಘು ವಿಮಾನವೊಂದು ನೆಲಕ್ಕೆ ಅಪ್ಪಳಿಸಿದ್ದು, ವಿಮಾನ ಸುಟ್ಟು ಕರಕಲಾಗಿದೆ. ವಿಮಾನದಲ್ಲಿ ಇದ್ದ ಇಬ್ಬರು ಪೈಲಟ್​​ಗಳು ಪ್ಯಾರಾಚೂಟ್ ಮೂಲಕ ಪಾರಾಗಿದ್ದು, ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

    ಲಘು ವಿಮಾನ ಅಪಘಾತವನ್ನು ಹಲವರು ಪ್ರತ್ಯಕ್ಷವಾಗಿ ನೋಡಿದ್ದು, ಕ್ಷಣಮಾತ್ರದಲ್ಲಿ ವಿಮಾನ ಮೇಲಿನಿಂದ ಕೆಳಕ್ಕೆ ಬಿದ್ದು ಸ್ವಲ್ಪ ಸಮಯದಲ್ಲೇ ಬೆಂಕಿ ಹೊತ್ತಿಕೊಂಡಿತು ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಕುದೇರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ತಾಜುದ್ದೀನ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಎಚ್ಎಎಲ್​​​ನಿಂದ ಬಂದಿದ್ದ ತರಬೇತಿ ಜೆಟ್ ವಿಮಾನ ಇದಾಗಿದ್ದು, ಚಾಮರಾಜನಗರ ಹಾಸು ಪಾಸು ಹಾದು ಹೋಗುತ್ತಿತ್ತು. ಇಂಡಿಯನ್ ಆರ್ಮಿ ವಿಂಗ್ ಕಮಾಂಡರ್ ತೇಜ್ಪಾಲ್ ಹಾಗೂ ಟ್ರೈನಿ ಭೂಮಿಕಾ ವಿಮಾನದಲ್ಲಿ ಇದ್ದವರು.ಕಮಾಂಡರ್ ತೇಜ್ಪಾಲ್ ಅವರಿಗೆ ಬೆನ್ನಿಗೆ ನೋವಾಗಿದ್ದು, ಭೂಮಿಕಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ವಿಮಾನ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ.

    ಇಂದು ವಿಶ್ವ ಕ್ಷೀರ ದಿನ 2023; ಈ ದಿನದ ಮಹತ್ವ, ಉದ್ದೇಶವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts