ಜೆಡಿಎಸ್​ನಲ್ಲಿ ದೊಡ್ಡಗೌಡ, ಸಣ್ಣಗೌಡ, ಮರಿಗೌಡ ಯಾರು?

hdd family
Published on

ಮೈಸೂರು: ಜೆಡಿಎಸ್​ಗೆ ಕುಟುಂಬದ ಅಭಿವೃದ್ಧಿಯೇ ಮುಖ್ಯ. ಅವರನ್ನು ದೊಡ್ಡಗೌಡ, ಸಣ್ಣಗೌಡ, ಮರಿಗೌಡ ಅಂತಾರೆ... ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಸೋನಿಯಾ ಗಾಂಧಿ, ಟೆಂಪರರಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಇದ್ದರು ಎಂದು ಸಿ.ಟಿ. ರವಿ ಲೇವಡಿ ಮಾಡಿದರು. ನಾನು ಬೇರೆ ಪಕ್ಷಗಳ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರಿಗೆಲ್ಲ ಕುಟುಂಬದ ಅಭಿವೃದ್ಧಿಯೇ ಮುಖ್ಯ ಎಂದು ಮತ್ತೊಮ್ಮೆ ಪುನರುಚ್ಛರಿಸಿದರು.

ಸಿ.ಟಿ. ರವಿ ಹೇಳಿಕೆ ಬೆನ್ನಲ್ಲೇ ಜೆಡಿಎಸ್​ನಲ್ಲಿ ದೊಡ್ಡಗೌಡ, ಸಣ್ಣಗೌಡ, ಮರಿಗೌಡ ಯಾರು ಎಂಬ ಚರ್ಚೆ ಸಾರ್ವಜನಿಕ ವಯಲದಲ್ಲಿ ಶುರುವಾಗಿದೆ.

ಮೈಸೂರಿನ ಹೋಟೆಲ್​ವೊಂದರಲ್ಲಿ ಗುರುವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಸಿ.ಟಿ.ರವಿ ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ. ರಾಮದಾಸ್, ಎಚ್​. ವಿಶ್ವನಾಥ್, ಹರ್ಷವರ್ಧನ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net