

ಪುತ್ತೂರು ಗ್ರಾಮಾಂತರ: ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯರಾಮ ರೈ ಅಡ್ಯೆತ್ತಿಮಾರ್ ಆಯ್ಕೆಯಾಗಿದ್ದಾರೆ.
ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆಯಲ್ಲಿ ಅಧ್ಯಕ್ಷರ ಆಯ್ಕೆ ನಡೆಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಾರಾಯಣ ರೈ ಬಳ್ಳಮಜಲುಗುತ್ತು, ಹರೀಶ್ ಡಿಂಬ್ರಿ, ಶಶಿಕಲಾ ಎಸ್.ರೈ ಕುರಿಯ ಏಳ್ನಾಡುಗುತ್ತು, ಅನಿತಾ ರಮೇಶ್ ರೈ ಡಿಂಬ್ರಿ, ಆನಂದಕುಮಾರ್ ಉಳ್ಳಾಲ, ದಿನೇಶ್ ಸಾಲಿಯಾನ್ ಬೋಳಂತಿಮಾರ್, ಗೋಪಾಲಕೃಷ್ಣ ಕರೆಜ್ಜ, ಪ್ರಕಾಶ್ ಭಟ್ ಕೊಡೆಂಕಿರಿ(ಅರ್ಚಕ) ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತಾಧಿಕಾರಿ ಮೋನಪ್ಪ ಕೆ. ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು. ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು ಅಭಿನಂದಿಸಿ ಮಾತನಾಡಿದರು. ಸಮಿತಿ ರಚನೆಗೆ ಸಹಕರಿಸಿದ್ದ ಶಿವರಾಮ ಆಳ್ವ ಬಳ್ಳಮಜಲು, ರಮೇಶ್ ರೈ ಡಿಂಬ್ರಿ, ಸನತ್ ರೈ ಏಳ್ನಾಡುಗುತ್ತು ಅವರನ್ನು ಗೌರವಿಸಲಾಯಿತು. ಆಡಳಿತಾಧಿಕಾರಿ ಮೋನಪ್ಪ ಕೆ, ಅರ್ಚಕರಾಗಿದ್ದ ಗುರುರಾಜ್ ಮಡುಕುಲ್ಲಾಯ, ವಿಷ್ಣು ಅಡಿಗ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.