ಹಳೇ ವಿದ್ಯಾರ್ಥಿಗಳ ಸ್ನೇಹ ಸಂಗಮ

Bdk_reunion
Published on

ಮಂಜೇಶ್ವರ: ಕುಂಜತ್ತೂರು ಹೈಯರ್ ಸೆಕಂಡರಿ ಶಾಲೆಯಲ್ಲಿ ಭಾನುವಾರ 1994-95ನೇ ಸಳಿನ ಹಳೇ ವಿದ್ಯಾರ್ಥಿಗಳು 30 ವಷರ್ಗಳ ಬಳಿಕ ಕಲಿತ ಶಾಲೆಯಲ್ಲಿ ಕಳೆದು ಹೋದ ನೆನಪುಗಳನ್ನು ಮೆಲುಕು ಹಾಕಲು ಮತ್ತೆ ಸೇರಿ ಅದ್ದೂರಿಯ ಪೂರ್ವ ವಿದ್ಯಾರ್ಥಿ ಸಂಗಮಕ್ಕೆ ಸಾಕ್ಷಿಯಾದರು.

ಶಾಲೆಯಲ್ಲಿ 30 ವಷರ್ಕ್ಕೆ ಮೊದಲು ನಡೆಸಿದ ಶಾಲಾ ಅಸೆಂಬ್ಲಿ, ಪ್ರತಿಜ್ಞೆ ನಡೆಸಿ ತರಗತಿ ನಾಯಕ ಮುಖ್ಯಶಿಕ್ಷಕರಿಂದ ವಂದನೆ ಸ್ವೀಕರಿಸಿದ ಬಳಿಕ ವಾದ್ಯ ಮೇಳಗಳೊಂದಿಗೆ ಅಂದಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವೇದಿಕೆಗೆ ಆಗಮಿಸಿದರು. ಬಳಿಕ ಅಗಲಿದ ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮುಖ್ಯಶಿಕ್ಷಕ ಬಾಲಕೃಷ್ಣ ಜಿ.ಪಾರಿವಾಳವನ್ನು ಹಾರಿಬಿಡುವ ಮೂಲಕ ಹಳೇ ವಿದ್ಯಾರ್ಥಿ ಸಂಗಮವನ್ನು ಉದ್ಘಾಟಿಸಿದರು. ಸ್ನೇಹ ಸಂಗಮಕ್ಕೆ ವಿದ್ಯಾರ್ಥಿಗಳ ಜತೆಗೆ ಶಾಲೆಯ ನಿವೃತ್ತ ಶಿಕ್ಷಕರನ್ನು ಕೂಡ ಆಹ್ವಾನಿಸಲಾಗಿತ್ತು.

ಆಯಿಷಾ ಬಿಂತ್ ರಹ್ಮಾನ್ ಸ್ನೇಹ ಸಮ್ಮಿಲನಕ್ಕಾಗಿ ರಚಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಗುರು ವಂದನೆ ಕಾರ್ಯಕ್ರಮದಲ್ಲಿ ಅಧ್ಯಾಪಕರನ್ನು ಗೌರವಿಸಲಾಯಿತು.

ಅಪರಾಹ್ನ ಹೊರಾಂಗಣ ಆಟಗಳನ್ನು ಆಯೋಜಿಸಲಾಯಿತು. ಶಾಲಾ ದಿನಗಳಲ್ಲಿ ನಡೆದ ಘಟನೆಗಳ ಕುರಿತಾದ ಚರ್ಚೆಗಳು, ಫೋಟೋ ಪ್ರದರ್ಶನ, ಮತ್ತು ವೀಡಿಯೋ ಪ್ರದರ್ಶನ ನಡೆಯಿತು.

ಅಂದಿನ ಶಿಕ್ಷಕರಾದ ಈಶ್ವರ ಮಾಸ್ತರ್, ಆನಂದ ಮಾಸ್ತರ್, ದೈಹಿಕ ಶಿಕ್ಷಕಿ ಶೋಪಿಯಾ, ಶಾಲಾ ನೌಕರ ವಿಶ್ವನಾಥ್ ಹಾಗೂ ಶಿಕ್ಷಕಿಯರಾದ ಗಾಯತ್ರಿ, ಸುನಿತಾ, ಸಪ್ತೇಶ್ವರಿ, ಶ್ರೀಮತಿ, ಸರಸ್ವತಿ, ನಳಿನಿ, ಪ್ರಸನ್ನ, ಶ್ಯಾಮಲಾ, ಶಶಿಕಲಾ, ಗುಲಾಬಿ, ಲೀಲಾ, ರಮಣಿ, ಮರ್ಸಿ, ಮತ್ತು ಈಗಿನ ದೈಹಿಕ ಶಿಕ್ಷಕಿ ಅನಿತಾ ಟೀಚರ್ ಮೊದಲಾದವರು ಪಾಲ್ಗೊಂಡಿದ್ದರು.

ಯತೀಶ, ದಿನೇಶ್, ಪ್ರಶಾಂತ್, ಗಪೂರ್, ನವಾಜ್ ತಂಙಳ್, ನವಾಜ್ ಹಾಗೂ ಪುತ್ತು ಬಾಚಳಿಕೆ ನೇತೃತ್ವ ನೀಡಿದರು. ಅಶ್ರಫ್ ಕುಂಜತ್ತೂರು ಸ್ವಾಗತಿಸಿ, ನವಾಜ್ ವಂದಿಸಿದರು. ಅಂಕಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net