ಈ ವಿಷಯದಲ್ಲಿ ಬ್ಯಾಟರ್ಸ್​​ಗಿಂತ ಬೌಲರ್ಸ್​​ ಬೆಸ್ಟ್​! ವಾಸೀಮ್ ಅಕ್ರಮ್, ಯೂನಿಸ್​ ಹೋಲಿಕೆ ಮಾಡಿದ ಬುಮ್ರಾ

ವಿಜಯವಾಣಿ - 2024-07-28T170112.294
Published on

ನವದೆಹಲಿ: ಪ್ರಸ್ತುತ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆಡುತ್ತಿರುವ ಟೀಮ್ ಇಂಡಿಯಾ ಒಂದು ಪಂದ್ಯವನ್ನು ಈಗಾಗಲೇ ಗೆದ್ದು ಬೀಗಿದೆ. ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಸರಣಿ ಗೆಲುವಿನತ್ತ ಮುಖ ಮಾಡಿರುವ ಭಾರತ ತಂಡಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಗಳು ಹರಿದುಬರುತ್ತಿವೆ. ಇನ್ನು ಈ ಮಧ್ಯೆ ಕ್ಯಾಪ್ಟನ್ಸಿ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಭಾರತದ ಸ್ಟಾರ್​ ವೇಗಿ ಜಸ್ಪ್ರಿತ್ ಬುಮ್ರಾ, ನಾಯಕತ್ವ ಅನ್ನೋ ವಿಷಯ ಬಂದರೆ ಆ ಸ್ಥಾನಕ್ಕೆ ಮೊದಲ ಆದ್ಯತೆ ಬ್ಯಾಟರ್ಸ್​​ಗಳು ಎಂದು ಹೇಳಿದ್ದಾರೆ.

ಬೌಲರ್ಸ್​ಗಳಿಗೂ ಕ್ಯಾಪ್ಟನ್ಸಿ ಚೆನ್ನಾಗಿ ಮಾಡುವ ಸಾಮರ್ಥ್ಯವಿದೆ. ನಾವು ಗಮನಿಸಿ ನೋಡುವುದಾದರೆ ಬೌಲರ್ಸ್​ಗಳಿಗಿಂತ ಬ್ಯಾಟ್ಸ್​ಮನ್​ಗಳಿಗೆ ನಾಯಕತ್ವ ಹೆಚ್ಚಾಗಿ ನೀಡುತ್ತಾರೆ. ಅವರೇ ಹೆಚ್ಚಾಗಿ ಕ್ಯಾಪ್ಟನ್ ಆಗಿರುವುದು. ನನ್ನ ಪ್ರಕಾರ, ವೇಗಿಗಳು ಬ್ಯಾಟರ್ಸ್​ಗಳಿಗೆ ಹೋಲಿಸಿದರೆ ಉತ್ತಮವಾಗಿ ನಾಯಕತ್ವ ವಹಿಸುತ್ತಾರೆ ಹಾಗೂ ನಿಭಾಯಿಸುತ್ತಾರೆ. ಈ ಹಿಂದೆ ಪಾಕಿಸ್ತಾನ ತಂಡವನ್ನು ವೇಗಿಗಳಾದ ವಾಸೀಮ್ ಅಕ್ರಮ್ ಮತ್ತು ವಾಖರ್​ ಯೂನಿಸ್​ ನಾಯಕರಾಗಿ ಮುನ್ನಡೆಸಿದ್ದು ನಾವೆಲ್ಲಾ ನೋಡಿದ್ದೇವೆ. ಭಾರತದಲ್ಲಿ ಕಪಿಲ್ ದೇವ್ ಮತ್ತು ಇಮ್ರಾನ್ ಖಾನ್ ಇಬ್ಬರು ಸಹ ಕ್ಯಾಪ್ಟನ್​ಗಳಾಗಿ ತಮ್ಮ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಈ ಸಾಲಿಗೆ ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಕೂಡ ಸೇರುತ್ತಾರೆ ಎಂದರು.

ಕ್ಯಾಪ್ಟನ್ಸಿ ಹೆಚ್ಚಾಗಿ ಬ್ಯಾಟರ್ಸ್​ಗೆ ಯಾಕೆ ಕೊಡುತ್ತಾರೆ ಅಂದ್ರೆ ಬೌಲರ್ಸ್​ಗಳಿಗೆ ಒತ್ತಡ ಜಾಸ್ತಿ ಇರುತ್ತದೆ ಎಂದು ಭಾವಿಸಿ, ಆಯಾ ಮ್ಯಾನೇಜ್​ಮೆಂಟ್​ನವರು ಬ್ಯಾಟರ್ಸ್​ಗಳಿಗೆ ನಾಯಕತ್ವ ಸ್ಥಾನ ಕೊಡುತ್ತಾರೆ. ಅವರಿಗೆ ಮೊದಲ ಆದ್ಯತೆ. ಇದು ಏಕೆ ಅಂದರೆ ಬೌಲರ್​ಗಳಿಗೆ ಹೆಚ್ಚು ಒತ್ತಡ ಅಥವಾ ಬೇರೆ ಕಾರಣಗಳು ಇರಬಹುದು ಎಂದು. ಆದ್ರೆ, ಈ ವಿಷಯದಲ್ಲಿ ನನ್ನ ಅಭಿಪ್ರಾಯ ಏನಿದೆಯೋ ಅದು ಹಾಗೇ ಉಳಿಯುತ್ತದೆ ಎಂದು ಹೇಳಿದ್ದಾರೆ.

17 ವರ್ಷಗಳ ಬಳಿಕ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಸ್ಪ್ರಿತ್ ಬುಮ್ರಾ ಪ್ರಸ್ತುತ ರೆಸ್ಟ್​ನಲ್ಲಿದ್ದಾರೆ. ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಮಿಸ್ ಮಾಡಿಕೊಂಡ ಬುಮ್ರಾ, ಮುಂದಿನ ಟೂರ್ನಿಗೆ ಎದುರುನೋಡುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net