ಸಮನ್ಸ್​ ಯಾಕೆ ಕಳಿಸ್ತೀರಾ? ತಾಕತ್ ಇದ್ರೆ ಇಲ್ಲಿಗೆ ಬಂದು ಅರೆಸ್ಟ್​ ಮಾಡಿ; ಇ.ಡಿ. ಮತ್ತು ಕೇಂದ್ರಕ್ಕೆ ಜಾರ್ಖಂಡದ ಸಿಎಂ ಸವಾಲು!

hemant soren
Published on

ರಾಂಚಿ: ಇಂದು (ನ.3) ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್​, ಇ.ಡಿ. (ಎನ್ಫೋ​ರ್​ಸ್​​ಮೆಂಟ್​ ಡೈರೆಕ್​ಟರೇಟ್​) ಮತ್ತು ಕೇಂದ್ರಕ್ಕೆ ತಮ್ಮನ್ನು ಬಂಧಿಸುವಂತೆ ಸವಾಲು ಹಾಕಿದ್ದಾರೆ.

ಹೇಮಂತ್​ ಸೊರೆನ್​ ಗುರುವಾರ (ಅ.27) ಇ.ಡಿ.ಯ ಮುಂದೆ ವಿಚಾರಣೆಗಾಗಿ ಹಾಜರಾಗಬೇಕಿತ್ತು. ಆದರೆ ಅವರು ಛತ್ತೀಸ್‌ಗಢ ಸರ್ಕಾರ ಆಯೋಜಿಸುತ್ತಿರುವ ಬುಡಕಟ್ಟು ಉತ್ಸವದಲ್ಲಿ ಭಾಗವಹಿಸಲು ರಾಯ್‌ಪುರಕ್ಕೆ ತೆರಳಿದ್ದಾರೆ. ತೆರಳುವ ಮುನ್ನ ತಮ್ಮ ಅಧಿಕೃತ ನಿವಾಸದ ಹೊರಗೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕರ್ತರಿಗೆ ಬಿಜೆಪಿ ವಿರುದ್ಧ ಸುದೀರ್ಘ ರಾಜಕೀಯ ಹೋರಾಟಕ್ಕೆ ಸಿದ್ಧರಾಗಿರಲು ಹೇಳಿದರು.

‘ಇವತ್ತು ಛತ್ತೀಸ್‌ಗಢದಲ್ಲಿ ಕಾರ್ಯಕ್ರಮ ಇರುವಾಗ ಇಡಿ ನನ್ನನ್ನು ಕರೆದಿದೆ. ನಾನು ಅಪರಾಧ ಮಾಡಿದ್ದರೆ ಬಂದು ನನ್ನನ್ನು ಬಂಧಿಸಿ. ವಿಚಾರಣೆ ಯಾಕೆ ಮಾಡಬೇಕು? ಇಡಿ ಕಚೇರಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಏಕೆ, ನೀವು ಜಾರ್ಖಂಡ್​ನ ಜನರನ್ನು ಕಂಡು ಹೆದರುತ್ತೀರಾ?’ ಎಂದು ಸವಾಲು ಹಾಕಿದರು.

‘2019 ರಲ್ಲಿ ಐತಿಹಾಸಿಕ ಜನಾದೇಶ ಪಡೆದ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ದೊಡ್ಡ ಪಿತೂರಿ ನಡೆಯುತ್ತಿದೆ. ಇದರ ಭಾಗವಾಗಿ ಕೇಂದ್ರ ಸರ್ಕಾರ ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಹೇಮಂತ್​ ಸೊರೆನ್’ ಆರೋಪಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net