ಬಾಯ್​ಫ್ರೆಂಡ್​ ಒರ್ರಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಜಾಹ್ನವಿ

Janhvi Kapoor - Orhan Awatramani
Published on

ಮುಂಬೈ: ಈ ಒರ್ರಿ ಯಾರು? ಇಂಥದ್ದೊಂದು ಪ್ರಶ್ನೆ ಕೆಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಕಾರಣ, ಜಾಹ್ನವಿ ಮತ್ತು ಒರ್ರಿ ಅಷ್ಟು ಆಪ್ತರಾಗಿದ್ದು ನೋಡಿದರೆ, ಅವರು ಬರೀ ಗೆರೆಯರೆಲ್ಲ, ಅದನ್ನು ಮೀರಿದ ಸಂಬಂಧ ಅವರ ನಡುವೆ ಇದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಅಷ್ಟೇ ಅಲ್ಲ, ಒರ್ಹಾನ್ ಅವತ್ರಮಣಿ ಅಲಿಯಾಸ್​ ಒರ್ರಿಯನ್ನು ಜಾಹ್ನವಿಯ ಬಾಯ್​ಫ್ರೆಂಡ್​ ಎಂದೇ ಮಾಧ್ಯಮಗಳಲ್ಲಿ ಕರೆಯಲಾಗುತ್ತಿತ್ತು.

ಆದರೆ, ಜಾಹ್ನವಿ ಯಾವತ್ತೂ ಒರ್ರಿ ಬಗ್ಗೆ ಮಾತನಾಡಿಲ್ಲ. ಅವರಿಬ್ಬರ ಗೆಳೆತನ ಅಥವಾ ಸಂಬಂಧದ ಕುರಿತಾಗಿ ಎಲ್ಲೂ ಹೇಳಿಕೊಂಡಿರಲಿಲ್ಲ. ಈಗ ಮೊದಲ ಬಾರಿಗೆ ಅವರು ಒರ್ರಿ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ 'ಮಿಲಿ' ಚಿತ್ರದ ಪ್ರಚಾರದ ಸಂದರ್ಭದಲ್ಲಿ ಆತನ ಬಗ್ಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

'ಒರ್ರಿ ನನಗೆ ಬಹಳ ವರ್ಷಗಳ ಪರಿಚಯ. ಆತ ಜತೆಗಿದ್ದರೆ, ನಾನು ಮನೆಯಲ್ಲಿದ್ದೇನೆ ಎಂಬ ಭಾವನೆ ಬರುತ್ತದೆ. ನನಗೆ ಆತನನ್ನು ಕಂಡರೆ ಬಹಳ ವಿಶ್ವಾಸ. ಆ ತರಹದ ಸ್ನೇಹಿತರು ಸಿಗುವುದು ಬಹಳ ಕಷ್ಟ. ಅವನೊಬ್ಬ ಅದ್ಭುತ ಮನುಷ್ಯ' ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ನ್ಯೂಯಾರ್ಕ್​ನಲ್ಲಿ ಒರ್ರಿ ಜತೆಗಿರುವ ಫೋಟೋಗಳನ್ನು ಜಾಹ್ನವಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಬರೀ ನ್ಯೂಯಾರ್ಕ್​​ಗೆ ಮಾತ್ರವಲ್ಲ, ಜಾಹ್ನವಿ ಯೂರೋಪ್​ ಟ್ರಿಪ್​ಗೆ ಹೋದಾಗಲೂ ಒರ್ರಿ ಜತೆಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ಜಾಹ್ನವಿ ಅಭಿನಯದ 'ಮಿಲಿ' ಚಿತ್ರದ ವಿಶೇಷ ಸ್ಕ್ರೀನಿಂಗ್​ನಲ್ಲಿ ಒರ್ರಿ ಬಹಳ ಖುಷಿಯಿಂದ ಓಡಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net