

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಇಂದು (ನ.06) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟ ರಣಬೀರ್ ಕಪೂರ್ ತಂದೆಯಾಗಿ ಬಡ್ತಿ ಪಡೆದಿದ್ದಾರೆ.
ಇಂದು ಬೆಳಗ್ಗೆ 7 ಗಂಟೆಗೆ ಹೆರಿಗೆಗೆಂದು ಆಲಿಯಾ ಭಟ್, ಮುಂಬೈನಲ್ಲಿರುವ ಎಚ್.ಎನ್. ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮಧ್ಯಾಹ್ನ 12.05ರ ಸಮಯಕ್ಕೆ ಮಗು ಜನಿಸಿದೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆಲಿಯಾ ಭಟ್ ಆಸ್ಪತ್ರೆಗೆ ದಾಖಲಾಗುವಾಗ ಪತಿ ರಣಬೀರ್ ಕಪೂರ್ ಸಹ ಜೊತೆಯಲ್ಲಿಯೇ ಆಮಿಸಿದ್ದರು ಎಂದು ತಿಳಿದುಬಂದಿದೆ.
ಈ ವರ್ಷದ ಏಪ್ರಿಲ್ನಲ್ಲಿ ಆಲಿಯಾ ಮತ್ತು ರಣಬೀರ್ ಇಬ್ಬರು ಮದುವೆ ಆದರು. ಜೂನ್ ತಿಂಗಳಲ್ಲಿ ಆಲಿಯಾ, ತಾನು ಗರ್ಭಿಣಿಯಾಗಿರುವ ಸುದ್ದಿಯನ್ನು ಇನ್ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದರು. ಕಳೆದ ತಿಂಗಳು ಮುಂಬೈನಲ್ಲಿರುವ ಆಲಿಯಾ ಮತ್ತು ರಣಬೀರ್ ಅವರ ಮನೆಯಲ್ಲಿ ಫ್ರೆಂಡ್ಸ್ ಎಲ್ಲ ಸೇರಿ ಸೀಮಂತ ಕಾರ್ಯಕ್ರಮ ನಡೆಸಿದರು. ಇದೀಗ ಹೆಣ್ಣು ಮಗುವಿಗೆ ಆಲಿಯಾ ಜನ್ಮ ನೀಡಿದ್ದು, ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. (ಏಜೆನ್ಸೀಸ್)