More

  ನಖರಾ ಮಾಡಿದ ನಾಯಕನಿಗೆ ಚಿತ್ರದಿಂದ ಗೇಟ್​ಪಾಸ್ ಕೊಟ್ಟ ಅರ್ಜುನ್​ ಸರ್ಜಾ!

  ಹೈದರಾಬಾದ್​: ಸಿನಿಮಾದಲ್ಲಿ ನಟ-ನಟಿಯರ ನಖರಾ ಬಹಳ ಸಹಜ. ಈ ಬಗ್ಗೆ ಆಡಲಿಕ್ಕೂ ಆಗದೇ, ಅನುಭವಿಸಲಿಕ್ಕೂ ಆಗದೇ ಎಷ್ಟೋ ನಿರ್ಮಾಪಕರು-ನಿರ್ದೇಶಕರು ಒಳಗೊಳಗೇ ನೋವು ತಿನ್ನುತ್ತಾರೆ. ಆದರೆ, ಅರ್ಜುನ್​ ಸರ್ಜಾ ಮಾತ್ರ ನಖರಾ ಮಾಡಿದ ತಮ್ಮ ಹೊಸ ಚಿತ್ರದ ನಾಯಕನನ್ನು ನಿರ್ದಾಕ್ಷಿಣ್ಯವಾಗಿ ಚಿತ್ರತಂಡದಿಂದ ಕೈಬಿಟ್ಟಿದ್ದಾರೆ.

  ಇದನ್ನೂ ಓದಿ: ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕಾರ ಭರ್ಜರಿ ಡಾನ್ಸ್​! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ವಿಡಿಯೋ

  ಅರ್ಜುನ್​ ಸರ್ಜಾ ತಮ್ಮ ಮಗಳು ಐಶ್ವರ್ಯಾ ಅವರನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ಹೊಸ ಚಿತ್ರವೊಂದನ್ನು ಕೆಲವು ತಿಂಗಳುಗಳ ಹಿಂದೆ ಪ್ರಾರಂಭಿಸಿದ್ದರು. ವಿಶ್ವಕ್​ ಸೇನ್​ ಮತ್ತು ಐಶ್ವರ್ಯಾ ಅಭಿನಯದ ಈ ಚಿತ್ರದ ಮುಹೂರ್ತಕ್ಕೆ ಪವನ್​ ಕಲ್ಯಾಣ್​, ಪ್ರಕಾಶ್​ ರೈ ಸೇರಿದಂತೆ ಹಲವರು ಬಂದು ಚಿತ್ರತಂಡ್ಕ್ಕೆ ಶುಭ ಹಾರೈಸಿದ್ದರು. ಈಗ ಆ ಚಿತ್ರತಂಡದಿಂದ ನಾಯಕ ವಿಶ್ವಕ್​ ಸೇನ್​ ಅವರನ್ನು ಕೈಬಿಟ್ಟಿದ್ದಾರೆ ಅರ್ಜುನ್​ ಸರ್ಜಾ.

  ವಿಶ್ವಕ್​ ಸೇನ್​ ಅವರನ್ನು ಕೈಬಿಡುವುದಕ್ಕೆ ಮುಖ್ಯ ಕಾರಣ ಅವರ ನಖರಾ. ಚಿತ್ರವನ್ನು ಒಪ್ಪಿಕೊಂಡ ವಿಶ್ವಕ್​, ಆ ನಂತರ ಚಿತ್ರೀಕರಣಕ್ಕೆ ಬರದೆ ಕೈಕೊಡುವುದಕ್ಕೆ ಪ್ರಾರಂಭಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ ಒಂದು ದೊಡ್ಡ ಹಂತದ ಚಿತ್ರೀಕರಣವನ್ನು ಪ್ಲಾನ್​ ಮಾಡಿದ್ದರಂತೆ ಅರ್ಜುನ್​. ಇದಕ್ಕೆ ಬರುವುದಕ್ಕೆ ಪ್ರಾಮಿಸ್​ ಮಾಡಿದ್ದ ವಿಶ್ವಕ್​, ಕೊನೆಯ ಘಳಿಗೆಯಲ್ಲಿ ಏನೋ ಹೇಳಿ ತಪ್ಪಿಸಿಕೊಂಡಿದ್ದಾರೆ. ಇದರಿಂದ ಅರ್ಜುನ್​ ಸರ್ಜಾ ಅವರಿಗೆ ಸಾಕಷ್ಟು ನುಕ್ಸಾನು ಆಗಿದೆ. ಇದೆಲ್ಲದರಿಂದ ನೊಂದ ಅವರು, ಇದೀಗ ಚಿತ್ರತಂಡದಿಂದ ವಿಶ್ವಕ್​ ಅವರನ್ನು ಹೊರಹಾಕಿದ್ದಾರೆ.

  ಈ ಕುರಿತು ಮಾತನಾಡಿರುವ ಅರ್ಜುನ್​ ಸರ್ಜಾ, ‘ಕಥೆ ಇಷ್ಟಪಟ್ಟು ಚಿತ್ರದಲ್ಲಿ ನಟಿಸುವುದಕ್ಕೆ ವಿಶ್ವಕ್​ ಒಪ್ಪಿಕೊಂಡಿದ್ದರು. ಅವರು ಕೇಳಿದ ಸಂಭಾವನೆ ಕೊಡುವುದಕ್ಕೆ ನಾವು ತಯಾರಿದ್ದೆವು. ಆದರೆ, ಅವರು ಚಿತ್ರೀಕರಣಕ್ಕೆ ಸರಿಯಾಗಿ ಬರುತ್ತಿರಲಿಲ್ಲ. ಕೇರಳದಲ್ಲಿ ಶೂಟಿಂಗ್ ಪ್ಲಾನ್​ ಮಾಡಿದ್ದೆವು. ಜಗಪತಿ ಬಾಬು ಮುಂತಾದ ದೊಡ್ಡ ನಟರು ಈ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಶ್ವಕ್​ ಬರದೆ ಕೈಕೊಟ್ಟಿದ್ದರಿಂದ, ಎಲ್ಲರ ಡೇಟ್ಸ್​ ಕೈತಪ್ಪಿದಂತಾಗಿದೆ. ನನ್ನ ಜೀವನದಲ್ಲಿ ವಿಶ್ವಕ್​ಗೆ ಮಾಡಿದಷ್ಟು ಫೋನ್​ ಕಾಲ್​ಗಳನ್ನು ಬೇರೆ ಯಾರಿಗೂ ಮಾಡಿರಲಿಲ್ಲ’ ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ ಅರ್ಜುನ್​.

  ಇದನ್ನೂ ಓದಿ: ಇಂದು ವಿಜಯಾನಂದ ಆಡಿಯೋ ಬಿಡುಗಡೆ; ಡಾ.ವಿಜಯ ಸಂಕೇಶ್ವರರ ಜೀವನಾಧಾರಿತ ಚಿತ್ರ

  ‘ಅಲ್ಲು ಅರ್ಜುನ್​, ರಾಮ್​ಚರಣ್​ ಮುಂತಾದ ದೊಡ್ಡ ಸ್ಟಾರ್​ ನಟರು ಬಹಳ ವಿನಮ್ರರಾಗಿ ನಡೆದುಕೊಳ್ಳುತ್ತಾರೆ. ವೃತ್ತಿಪರವಾಗಿ ಕೆಲಸ ಮಾಡುತ್ತಾರೆ. ಆದರೆ, ವಿಶ್ವಕ್​ಗೆ ವೃತ್ತಿಪರತೆ ಎಂದರೇನು ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ನನಗೆ ಅವರ ಜತೆಗೆ ಕೆಲಸ ಮಾಡುವುದಕ್ಕೆ ಇಷ್ಟವಿಲ್ಲ. ಅವರನ್ನು ಚಿತ್ರತಂಡದಿಂದ ಕೈಬಿಟ್ಟು, ಇನ್ನೊಬ್ಬರೊಂದಿಗೆ ಚಿತ್ರ ಮುಂದುವರೆಸುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ. ವಿಶ್ವಕ್​ ಬದಲು ಬೇರೆ ಯಾರು ಬರುತ್ತಾರೆ ಎಂದು ಇನ್ನಷ್ಟೇ ಕಾದು ನೋಡಬೇಕಿದೆ.

  ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಆಲಿಯಾ ಭಟ್​: ರಣಬೀರ್​ ಕಪೂರ್​ ಕುಟುಂಬಕ್ಕೆ ಮಹಾಲಕ್ಷ್ಮೀಯ ಆಗಮನ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts