ಭಾವಿ ಪತಿಯ ಮೊದಲ ಮದುವೆಯಲ್ಲಿ ಹನ್ಸಿಕಾರ ಭರ್ಜರಿ ಡಾನ್ಸ್​! ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ವಿಡಿಯೋ

Hansika
Published on

ಮುಂಬೈ​: ನಟಿ ಹನ್ಸಿಕಾ ಮೋಟ್ವಾನಿ, ಉದ್ಯಮಿ ಸೋಹೈಲ್​ ಕಠೂರಿಯಾ ಎಂಬಾತನನ್ನು ಮದುವೆಯಾಗುತ್ತಿರುವುದು, ಸೋಹೈಲ್​ ಇತ್ತೀಚೆಗಷ್ಟೇ ಹನ್ಸಿಕಾಗೆ ಪ್ಯಾರಿಸ್​ನ ಐಫೆಲ್​ ಟವರ್​ ಎದುರು ಪ್ರಪೋಸ್​ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ, ಹನ್ಸಿಕಾ, ಭಾವಿ ಪತಿಯ ಮೊದಲ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ವಿಡಿಯೋ ನೋಡಿ ಇದೀಗ ಅಭಿಮಾನಿಗಳು ದಂಗಾಗಿದ್ದಾರೆ.

ಹೌದು, ಹನ್ಸಿಕಾ ಈಗ ಮದುವೆಯಾಗಲು ಮುಂದಾಗಿರುವ ಸೊಹೈಲ್​ ಬೇರೆ ಯಾರೂ ಅಲ್ಲ, ಹನ್ಸಿಕಾಳ ಗೆಳತಿ ರಿಂಕಿ ಬಜಾಜ್​ ಅವರ ಮಾಜಿ ಪತಿ. ಸೊಹೈಲ್​ಗೆ ಇದು ಎರಡನೆಯ ಮದುವೆ. ಅದು ಕೂಡ ಮಾಜಿ ಪತ್ನಿಯ ಗೆಳತಿ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿಯ ಜೊತೆ!

ಮೂಲಗಳ ಪ್ರಕಾರ, ಹನ್ಸಿಕಾ ಅವರ ಬೆಸ್ಟ್​ಫ್ರೆಂಡ್​ ರಿಂಕಿ ಬಜಾಜ್​ ಜೊತೆ ಸೋಹೈಲ್ 2016ರಲ್ಲಿ ಗೋವಾದಲ್ಲಿ ಮದುವೆ ಆಗಿದ್ದರು. ಅಷ್ಟೇ ಅಲ್ಲ, ಈ ಮದುವೆಯ ಸಂಗೀತ ಕಾರ್ಯಕ್ರಮದಲ್ಲಿ ಹನ್ಸಿಕಾ ಸಹ ನೃತ್ಯ ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋವನ್ನು ಈ ಕೆಳಗಿನ ಯೂಟ್ಯೂಬ್​ ಲಿಂಕ್​ನಲ್ಲಿ ನೀವು ಕಾಣಬಹುದು.

ಮಾಧ್ಯಮ ವರದಿಗಳ ಪ್ರಕಾರ ಹನ್ಸಿಕಾ ಮತ್ತು ಸೊಹೈಲ್​ ಇಬ್ಬರು ಕೆಲ ಕಾಲದಿಂದ ಫ್ರೆಂಡ್ಸ್​ ಆಗಿದ್ದರು ಎನ್ನಲಾಗಿದೆ. ಅಲ್ಲದೆ, ಇಬ್ಬರು ಬಿಜಿನೆಸ್​ ಪಾಲುದಾರರೂ ಹೌದಂತೆ! ಅನೇಕ ಈವೆಂಟ್​ಗಳಲ್ಲಿ ಇಬ್ಬರು ಜೊತೆಯಾಗಿಯೇ ಕೆಲಸ ಮಾಡಿದೆ. ಒಟ್ಟಿಗೆ ಕೆಲಸ ಮಾಡುತ್ತಾ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದರು ಎಂದು ಹೇಳಲಾಗಿದೆ.

ಇನ್ನು 2016ರಲ್ಲಿ ದೊಡ್ಡ ಮಟ್ಟದಲ್ಲಿ ಮದುವೆಯಾದ ರಿಂಕಿ ಮತ್ತು ಸೋಹೈಲ್​ ನಡುವೆ ಕೆಲವು ಕಾಲದ ನಂತರ ಸಂಬಂಧ ಹಳಿಸಿದೆ. ಆ ನಂತರ ಇಬ್ಬರೂ ದೂರವಾದರಂತೆ. ಈ ಕಥೆಯಲ್ಲಿ ಹನ್ಸಿಕಾ ಯಾವಾಗ ಎಂಟ್ರಿ ಕೊಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ರಿಂಕಿಯಿಂದ ದೂರವಾದ ಸೋಹೈಲ್​, ಈಗ ಹನ್ಸಿಕಾ ಅವರನ್ನು ಎರಡನೆಯ ಮದುವೆಯಾಗುತ್ತಿದ್ದಾರೆ. ರಿಂಕಿ ಜತೆಗೆ ಸಂಬಂಧ ಯಾಕೆ ಹಳಿಸಿತು ಮತ್ತು ಹನ್ಸಿಕಾ ಜತೆಗೆ ಹೊಸ ಸಂಬಂಧ ಹೇಗೆ ಕುದುರಿತು ಎಂಬ ಕಥೆ ಇನ್ನಷ್ಟೇ ಗೊತ್ತಾಗಬೇಕಿದೆ. ಒಟ್ಟಿನಲ್ಲಿ ರಿಂಕಿಯಿಂದ ದೂರವಾದ ಸೋಹೈಲ್​, ಈಗ ಹನ್ಸಿಕಾ ಜತೆಗೆ ಮದುವೆಯಾಗುವುದಕ್ಕೆ ತಯಾರಿ ನಡೆಸಿದ್ದಾರೆ.

ಅಂದಹಾಗೆ, ಹನ್ಸಿಕಾ ಮತ್ತು ಸೋಹೈಲ್​ ಅವರ ನಿಶ್ಚಿತಾರ್ಥ ಆಗಿದ್ದೆಲ್ಲಿ ಗೊತ್ತಾ? ಪ್ಯಾರಿಸ್​ನ ಐಫೆಲ್​ ಟವರ್​ನ ಮುಂಬಾಗದಲ್ಲಿ. ಕ್ಯಾಂಡಲ್​ ಮತ್ತು ಗುಲಾಬಿಗಳನ್ನು ಹೃದಯದ ಆಕಾರದಲ್ಲಿ ಅಲಂಕರಿಸಿ, ಅದರ ನಡುವೆ ನಿಂತ ಹನ್ಸಿಕಾಗೆ ಸೋಹೈಲ್​ ಪ್ರಪೋಸ್​ ಮಾಡಿದ್ದಾರೆ. ಅವರ ಹಿಂದೆ ‘ಮ್ಯಾರಿ ಮೀ’ ಎಂಬ ಪದಗಳನ್ನು ನೋಡಬಹುದು. ಇದೇ ಸಂದರ್ಭದಲ್ಲಿ ಹನ್ಸಿಕಾ ಮತ್ತು ಸೋಹೈಲ್​ ಪರಸ್ಪರ ಉಂಗುರಗಳನ್ನು ತೊಡಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ‘ಈಗ ಮತ್ತು ಮುಂದೆಯೂ’ ಎಂದು ಹನ್ಸಿಕಾ ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಿಸಿರುವ ಸೋಹೈಲ್​, ‘ಐ ಲವ್​ ಯೂ’ ಎಂದು ಹೇಳಿದ್ದಾರೆ. ಅನೂಷ್ಕಾ ಶೆಟ್ಟಿ, ಖುಷ್ಬೂ, ಶ್ರೀಯಾ ರೆಡ್ಡಿ ಮುಂತಾದವರು ಈ ಜೋಡಿಗೆ ಶುಭ ಕೋರಿದ್ದಾರೆ.

ಹನ್ಸಿಕಾ ಮತ್ತು ಸೋಹೈಲ್​ ಮದುವೆ ಡಿಸೆಂಬರ್​ 4ರಂದು ಜೈಪುರದ ಮಂಡೋಟ ಫೋರ್ಟ್​ನಲ್ಲಿ ನಡೆಯಲಿದೆ. ಡಿ. 2ರಂದು ಮೆಹಂದಿ ಕಾರ್ಯಕ್ರಮವಿದ್ದು, ಮರುದಿನ ಸಂಗೀತ್​ ಆಯೋಜಿಸಲಾಗಿದೆ. ಡಿ. 4ರ ಮುಂಜಾನೆ ಹಳದಿ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಮದುವೆ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net