

ಮುಂಬೈ: ಖ್ಯಾತ ನಟಿ ಶ್ರೀದೇವಿ ಪುತ್ರಿ, ಬಾಲಿವುಡ್ ತಾರೆ ಜಾಹ್ನವಿ ಕಪೂರ್ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದು, ಫುಡ್ ಪಾಯ್ಸನಿಂಗ್ ಆಗಿದೆ ಎಂದು ಆಕೆಯ ತಂದೆ ಬೋನಿಕಪೂರ್ ಸ್ಪಷ್ಟಪಡಿಸಿದ್ದರು.
ಆದರೆ ಅಂದಿನಿಂದ ಜಾಹ್ನವಿ ಆರೋಗ್ಯದ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದವು.
ಆದರೆ ಇದಕ್ಕೆ ತೆರೆ ಎಳೆಯುವಂತೆ ಜಾಹ್ನವಿ ಕಪೂರ್ ಸ್ಪಷ್ಟನೆ ನೀಡಿದ್ದಾರೆ. ' ಕೆಲವು ದಿನಗಳಿಂದ ಸತತ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೆ. ನಾನು ತುಂಬಾ ಪ್ರಯಾಣಿಸಬೇಕಾಯಿತು. ಹೀಗಾಗಿ ನಾನು ಸ್ವಲ್ಪ ಬಳಲಿದ್ದೆ. ಒಂದು ಹಾಡಿನ ಚಿತ್ರೀಕರಣಕ್ಕಾಗಿ ನಾನು ಚೆನ್ನೈಗೆ ಹೋಗಿದ್ದೆ. ಅಲ್ಲಿ ನನಗೆ ಜಂಕ್ ಫುಡ್‌ನಿಂದ ಹೊಟ್ಟೆ ನೋವು ಪ್ರಾರಂಭವಾಯಿತು. ಮೆಲ್ಲನೆ ನನಗೆ ಸಹಿಸಲಾರದ ನೋವು ಆಯಿತು. ನನಗೆ ಕೋಣೆಗೆ ತೆರಳಲೂ ಸಾಧ್ಯವಾಗಲಿಲ್ಲ. ನಾನು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡೆ' ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.
ಅವರು ನಾಯಕಿಯಾಗಿರುವ ಹಿಂದಿ ಚಿತ್ರ ಉಲಘ್ ಆಗಸ್ಟ್ 2 ರಂದು ತೆರೆಗೆ ಬರಲು ಸಜ್ಜಾಗಿದೆ. ಕೊರಟಾಲ ಶಿವ ನಿರ್ದೇಶನದಲ್ಲಿ.. ಜೂನಿಯರ್ ಎನ್ ಟಿಆರ್ ನಾಯಕನಾಗಿ ನಟಿಸುತ್ತಿರುವ ದೇವರ ಸಿನಿಮಾದ ಮೂಲಕ ತೆಲುಗು ಪ್ರೇಕ್ಷಕರಿಗೂ ಪರಿಚಯವಾಗಲಿದ್ದಾರೆ.