

ಮುಂಬೈ: ದಕ್ಷಿಣ ಭಾರತದ ಸಿನಿರಂಗದಲ್ಲಿ ಮಿಂಚಿದ ಸಮಂತಾ ಇತ್ತೀಚೆಗೆ ನಟನೆಯಿಂದ ದೂರವಿದ್ದರೂ, ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ರಶ್ದಿ ದಾಳಿಕೋರನಿಗಿದೆ ಹಿಜ್ಬುಲ್ಲಾ ಲಿಂಕ್!
ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ, ಸಮಂತಾ ಜೀವನದ ಜೊತೆಗೆ ವೃತ್ತಿಜೀವನವು ಸಹ ಮಸುಕಾದಂತೆ ಕಂಡುಬರುತ್ತಿದ್ದರೂ, ಈ ನಟಿ ಮಾಡಿದ್ದೆಲ್ಲ, ಆಡಿದ ಮಾತುಗಳೆಲ್ಲವೂ ವಿವಾದವೇ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಅವರ ಹಳೆಯ ಸಂದರ್ಶನದ ಕಿರು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಮಾತನಾಡುವಾಗ, ಆಹಾರ ಮತ್ತು ಲೈಂಗಿಕತೆ ಈ ಎರಡು ವಿಷಯಗಳಲ್ಲಿ ಯಾವುದು ಇಲ್ಲದೆ ಬದುಕಲು ಸಾಧ್ಯವೇ ಎಂದು ಕೇಳಲಾಯಿತು. ಸ್ವಲ್ಪ ಹೊತ್ತು ಯೋಚಿಸಿದ ಸಮಂತಾ, ‘ನಾನು ಊಟವಿಲ್ಲದೆ ಬದುಕಬಲ್ಲೆ’ ಎಂದು ಉತ್ತರಿಸಿದರು. ಈ ವಿಡಿಯೋ ಇದೀಗ ಮತ್ತೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ.
ಸಮಂತಾ ಅವರ ಈ ದಿಟ್ಟ ಉತ್ತರದಿಂದ ಅಭಿಮಾನಿಗಳು ಆರಂಭದಲ್ಲಿ ಬೆಚ್ಚಿಬಿದ್ದರೂ, ಧೈರ್ಯವಾಗಿ ತಮ್ಮ ಮನಸಿನ ಮಾತಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಸಮಂತಾ ಅವರು ಸ್ಥಾಪಿಸಿದ ಟ್ರಲಾಲಾ ಮೂವಿಂಗ್ ಪಿಕ್ಚರ್ಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮಾ ಇಂಟಿ ಬಂಗಾರಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಬಾಲಿವುಡ್ ನಲ್ಲಿ ಹಲವು ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಮೂಲಕ ಆಕೆ ಎಷ್ಟರಮಟ್ಟಿಗೆ ಯಶಸ್ಸು ಪಡೆಯುತ್ತಾಳೋ ಕಾದು ನೋಡಬೇಕಿದೆ.