More

    ಶ್ರೀದೇವಿ ಪುತ್ರಿಗೆ ಮದುವೆ ಫಿಕ್ಸ್ ಆಯ್ತಾ? ಬಾಯ್​ಫ್ರೆಂಡ್ ಜೊತೆ ಮಹಾಕಾಳೇಶ್ವರನಿಗೆ ಪೂಜೆ ಸಲ್ಲಿಸಿದ ಜಾಹ್ನವಿ!

    ಮುಂಬೈ: ಜಾಹ್ನವಿ ತೆಲುಗಿನಲ್ಲಿ ಎನ್‌ಟಿಆರ್ ಎದುರು ‘ಎನ್‌ಟಿಆರ್ 30’ರಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಸದ್ಯ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಸೌತ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದು ಜಾಹ್ನವಿ ಹೇಳಿದ್ದಾರೆ. ಇದೇ ವೇಳೆ ಜಾನ್ವಿ ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
    ವಿಷಯಕ್ಕೆ ಬರುವುದಾದರೆ.. ಜಾಹ್ನವಿ ಕಳೆದ ಕೆಲವು ದಿನಗಳಿಂದ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ವೈರಲ್ ಆಗುತ್ತಿರುವುದು ಗೊತ್ತೇ ಇದೆ. ಆಕೆ ಶಿಖರ್ ಪಹಾರಿಯಾ ಎಂಬ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎಂಬ ಮಾತು ಸಹ ಕೇಳಿ ಬಂದಿತ್ತು.

    ಇದನ್ನೂ ಓದಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ 20 ವರ್ಷ ಜೈಲು!
    ಇತ್ತೀಚಿನ ಸುದ್ದಿ ಏನೆಂದರೆ ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದರಂತೆ. ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು ಅದು ಮದುವೆಗೆ ಸಂಬಂಧಿಸಿದ ಪೂಜಾಕಾರ್ಯಕ್ರಮವಾಗಿತ್ತು ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ಇನ್ನು ಜಾಹ್ನವಿಗೆ ತೆಲುಗಿನಲ್ಲಿ ಆಫರ್ ಮೇಲೆ ಆಫರ್​ ಬರುತ್ತಿದೆ. ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಅವರನ್ನು ಅಂತಿಮಗೊಳಿಸಲಾಗಿದೆಯಂತೆ. ಅನೇಕ ಹೆಸರುಗಳನ್ನು ಪರಿಶೀಲಿಸಿದ ತಂಡವು ಅಂತಿಮವಾಗಿ ಜಾಹ್ನವಿಯನ್ನು ಆರಿಸಿದೆಯಂತೆ.

    ಹಿರಿಯ ನಟಿ ಲಕ್ಷ್ಮೀಗೆ ಇಂದು ಹುಟ್ಟುಹಬ್ಬದ ಸಂಭ್ರಮ; 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – 4ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಕಲಾವಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts