More

  ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ 20 ವರ್ಷ ಜೈಲು!

  ವಿಶಾಖಪಟ್ಟಣಂ: ಅಪ್ರಾಪ್ತ ಬಾಲಕಿಯ ಮೇಲೆ 2022ರ ಜನವರಿಯಲ್ಲಿ ಅತ್ಯಾಚಾರ ಎಸಗಿದ 24 ವರ್ಷದ ಯುವಕನಿಗೆ ವಿಶಾಖಪಟ್ಟಣಂನ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿ. ಆನಂದಿನಿ ಮಂಗಳವಾರ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

  ಇದನ್ನೂ ಓದಿ: ಭಯೋತ್ಪಾದನೆ ಸಂಚಿನ ತನಿಖೆ: ಬೆಂಗಳೂರಿನ 6 ಸ್ಥಳಗಳಲ್ಲಿ ಎನ್​ಐಎ ದಾಳಿ

  ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಧೀಶರು ಅಪರಾಧಿಗೆ 5ಸಾವಿರ ರೂಪಾಯಿ ದಂಡ ವಿಧಿಸಿದರು.
  ಆಂಧ್ರದ ಅನಕಾಪಲ್ಲಿಯ ಕೆ.ವಿ.ನಕ್ಕಪಲ್ಲಿ ಮಂಡಲದ ಜಿ.ನಾಗೇಶ್ ವೃತ್ತಿಯಲ್ಲಿ ಚಾಲಕನಾಗಿದ್ದು, ಅಪ್ರಾಪ್ತ ಬಾಲಕಿ 2020 ರ ಜನವರಿ 20 ರಂದು ಉರುವಲು ಸಂಗ್ರಹಿಸಲು ಗೋಡಂಬಿ ತೋಟಕ್ಕೆ ಹೋಗಿದ್ದಾಗ ಆಕೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಮುರಳಿ ಕೃಷ್ಣ ಹೇಳಿದ್ದಾರೆ.

  ಸಂತ್ರಸ್ತೆಯ ಪಾಲಕರ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆ, 2012 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಆರೋಪ ಸಾಬೀತಾಗುತ್ತಿದ್ದಂತೆ ನ್ಯಾಯಾಧೀಶರು ನಾಗೇಶ್‌ಗೆ 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿದರು.

  ಸದನದಲ್ಲಿಯೇ ಸರ್ಕಾರ ಬದುಕಿದೆಯೋ ಸತ್ತಿದೆಯೋ ಎಂದು ಕೇಳಿದ ಆರ್​. ಅಶೋಕ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts