More

    ಹಿರಿಯ ನಟಿ ಲಕ್ಷ್ಮೀಗೆ ಇಂದು ಹುಟ್ಟುಹಬ್ಬದ ಸಂಭ್ರಮ; 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ – 4ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಕಲಾವಿದೆ..

    ಬೆಂಗಳೂರು: ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಲಕ್ಷ್ಮೀ ಅವರಿಗೆ ಇಂದು(ಡಿ.13) ಹುಟ್ಟುಹಬ್ಬದ ಸಂಭ್ರಮ. ಇತ್ತೀಚಿನ ವರ್ಷಗಳಲ್ಲಿ ಕನ್ನಡ ಟಿವಿ ವೀಕ್ಷಕರಿಗೆ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ಜಡ್ಜ್‌ ಸೀಟ್‌ನಲ್ಲಿ ಕುಳಿತು ಪ್ರೀತಿಯ ಲಕ್ಷ್ಮೀ ಅಮ್ಮನಾಗಿ ಗಮನ ಸೆಳೆಯುತ್ತಿರುವ ಅವರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಕ್ಷ್ಮೀ ಅವರ ಬದುಕಿನ ಕಥೆಯೂ ಆಸಕ್ತಿದಾಯಕ. ಜೂಲಿ ಲಕ್ಷ್ಮಿ ಎಂದೇ ಖ್ಯಾತಿ ಪಡೆದ ಲಕ್ಷ್ಮಿಯವರ ಬದುಕಿನ ಕುರಿತು ವಿವರ ಇಲ್ಲಿದೆ.

    ಇದನ್ನೂ ಓದಿ: ‘ಕಾಂತಾರ ಪ್ರೀಕ್ವೆಲ್​’ ಚಿತ್ರಕ್ಕೆ ಎಂಟ್ರಿ ಕೊಡ್ತಾರಾ ಈ ಚಿತ್ರರಂಗದ ಸ್ಟಾರ್ ನಟಿ?
    ಕನ್ನಡ ಚಿತ್ರರಂಗದ ಚಂದನದ ಗೊಂಬೆ ಲಕ್ಷ್ಮೀ ಬಹುಭಾಷಾ ತಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಲಕ್ಷ್ಮೀಯವರು ಕನ್ನಡವಲ್ಲದೇ ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂ ಸೇರಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಲಕ್ಷ್ಮಿಯವರ ಮೂಲ ಹೆಸರು ಯರಗುಡಿಪಾಡಿ ವೆಂಕಟ ಮಹಾಲಕ್ಷ್ಮಿ. ಇವರು 1952ರ ಡಿಸೆಂಬರ್‌ 13ರಂದು ಜನಿಸಿದರು. ಈಗವರಿಗೆ 71ರ ಹರಯ. ಇವರು ಮೊದಲು ತಮಿಳು ಚಿತ್ರದಲ್ಲಿ ನಟಿಸಿದರು. ಕನ್ನಡದಲ್ಲಿ ಗೋವಾದಲ್ಲಿ ಸಿಐಡಿ 999 ಮೊದಲ ಕನ್ನಡ ಚಲನಚಿತ್ರ. ತೆಲುಗಿನಲ್ಲಿ ಬಾಂಧವ್ಯಲು ಇವರ ಮೊದಲ ಚಲನಚಿತ್ರ.

    ಆಂಧ್ರಪ್ರದೇಶದ ನೆಲ್ಲೂರಿನ ಮೂಲದವರಾದ ಇವರ ತಂದೆ ಯರಗುಡಿಪತಿ ವರದರಾವ್ ನಿರ್ದೇಶಕ ಮತ್ತು ನಟರಾಗಿ ಗುರುತಿಸಿಕೊಂಡಿದ್ದರು. ಇವರ ನಿರ್ದೇಶನದ ಹೆಚ್ಚು ಚಿತ್ರಗಳು ಸಾಮಾಜಿಕ ವಿಷಯಗಳ ಮೇಲೆ ಕೇಂದ್ರಿತವಾಗಿದ್ದವು. ಇವರ ತಾಯಿ ರುಕ್ಮಿಣಿ ಮತ್ತು ಮುತ್ತಜ್ಜಿ ಎನ್.ಜಾನಕಿ ಕೂಡ ತಮಿಳು ಚಿತ್ರರಂಗದಲ್ಲಿ ನಟಿಯರಾಗಿ ಪರಿಚಿತರು. ಕುಟುಂಬದ ಮೂರನೇ ತಲೆಮಾರಿನ ನಟಿಯಾಗಿ ಲಕ್ಷ್ಮೀ ಚಿತ್ರರಂಗ ಪ್ರವೇಶಿದರು. ಲಕ್ಷ್ಮೀಯವರ ಪುತ್ರಿ ಐಶ್ವರ್ಯ ಕೂಡ 1990 ರಲ್ಲಿ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು.

    15ವರ್ಷಕ್ಕೇ ಬಣ್ಣ ಹಚ್ಚಿದ್ದ ಲಕ್ಷ್ಮೀ: 1968 ರಲ್ಲಿ ಕೇವಲ 15 ವರ್ಷದವರಿದ್ದಾಗಲೇ ತಮಿಳು ಚಿತ್ರ `ಜೀವನಾಂಶ’ ದಿಂದ ಸಿನರಂಗ ಪ್ರವೇಶಿಸಿದರು. 1975 ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ `ಜೂಲಿ’ ಚಿತ್ರದಿಂದ ತುಂಬಾ ಪ್ರಸಿದ್ಧಿ ಪಡೆದರು. 1968 ರಲ್ಲಿ ಡಾ.ರಾಜ್ ಅಭಿನಯದ `ಗೋವಾದಲ್ಲಿ ಸಿ.ಐ.ಡಿ 999′ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದರು. ನಂತರ ರಾಜ್ ಜೊತೆ `ನಾ ನಿನ್ನ ಮರೆಯಲಾರೆ’ ಮತ್ತು `ಒಲವು ಗೆಲವು’ ಚಿತ್ರಗಳಲ್ಲಿ ನಟಿಸಿದರು.
    ಕನ್ನಡ ಚಿತ್ರರಂಗದಲ್ಲಿ ಅನಂತನಾಗ್ ಮತ್ತು ಲಕ್ಷ್ಮೀ ಜೋಡಿ ಆಗಿನ ಕಾಲದ ಟಾಪ್ ಜೋಡಿಯಾಗಿತ್ತು. ತರಾಸು ಕಾದಂಬರಿ ಆಧಾರಿತ ಚಿತ್ರ`ಚಂದನದ ಗೊಂಬೆ’ ಮೂಲಕ ಆರಂಭವಾದ ಈ ಜೋಡಿ ಸುಮಾರು 25 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಪ್ರೇಕ್ಷಕರ ಮನ ಸೆಳೆಯಿತು. ಮಧ್ಯಮ ವರ್ಗದ ಸಮಾಜಿಕ ಸ್ಥಿತಿಗಳನ್ನು ಕನ್ನಡ ಚಲನಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಿದ ಶ್ರೇಯ ಅನಂತ್-ಲಕ್ಷ್ಮಿ ಜೋಡಿಗೆ ಸಲ್ಲಬೇಕು.
    ದಕ್ಷಿಣದ ನಾಲ್ಕು ಭಾಷೆಗಳನ್ನು ಅಚ್ಚುಕಟ್ಟಾಗಿ ಮಾತನಾಡುವ ಲಕ್ಷ್ಮೀ ಅವರು 70 ಮತ್ತು 80 ರ ದಶಕದಲ್ಲಿ ನಾಲ್ಕು ಭಾಷೆಗಳಲ್ಲಿ ಪಾರಮ್ಯ ಮೆರೆದವರು.

    ಕಿರುತೆರೆ ನಿರೂಪಕಿ: ಚಿತ್ರರಂಗದಿಂದ ಕೆಲಕಾಲ ವಿರಾಮ ಪಡೆದ ಇವರು ತಮಿಳು ,ಮಲಯಾಳಂ ಮತ್ತು ಕನ್ನಡ ಕಿರುತೆರೆಯ ಕೆಲವು ಪ್ರಮುಖ ಶೋಗಳ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಕನ್ನಡದಲ್ಲಿ `ಇದು ಕಥೆಯಲ್ಲ ಜೀವನ’ ಮತ್ತು `ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದ ನೆಡೆಸಿಕೊಟ್ಟಿದ್ದಾರೆ. ಜೀ ಕನ್ನಡದ `ಡ್ರಾಮಾ ಜೂನಿಯರ್ಸ್’ ಕಾರ್ಯಕ್ರಮದ ತೀರ್ಪುಗಾರರಾಗಿ ಲಕ್ಷ್ಮೀಯಮ್ಮನಾಗಿ ಗಮನ ಸೆಳೆದಿದ್ದಾರೆ.
    ವೈಯಕ್ತಿಕ ಜೀವನ: ಲಕ್ಷ್ಮೀಯವರು ಹದಿನೇಳನೇ ವಯಸ್ಸಿನಲ್ಲಿ ಭಾಸ್ಕರ ಎಂಬುವರನ್ನು ಮದೆವೆಯಾದರು. ಐಶ್ವರ್ಯ ಎಂಬ ಪುತ್ರಿ ಜನಿಸಿದರು. ಆದರೆ 1974 ರಲ್ಲಿ ವಿಚ್ಚೇದನ ಪಡೆದ ಲಕ್ಷ್ಮಿಯವರು 1975 ರಲ್ಲಿ ಮಲಯಾಳಂ ಚಿತ್ರ ನಿರ್ಮಾಪಕ ಮತ್ತು ನಟ ಮೋಹನ್ ಶರ್ಮಾರನ್ನು ಮದುವೆಯಾದರು. ಐದು ವರ್ಷದ ದಾಂಪತ್ಯದ ನಂತರ ವಿಚ್ಚೇದನ ಪಡೆದ ಇವರು 1987 ರಲ್ಲಿ ಚಿತ್ರನಿರ್ದೇಶಕ ಶಿವಚಂದ್ರನ್ ಜೊತೆ ವಿವಾಹವಾದರು. ಈ ದಂಪತಿಗಳು `ಸಂಯುಕ್ತ’ ಎಂಬ ಪುತ್ರಿಯನ್ನು ದತ್ತು ತೆಗೆದುಕೊಂಡರು.

    ನಟಿ ತ್ರಿಶಾ ವಿರುದ್ಧ ಮಾನನಷ್ಟ ಮೊಕದ್ದಮೆ; ನಟ ಮನ್ಸೂರ್​ಗೆ ​ ಛೀಮಾರಿ ಹಾಕಿದ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts