More

    ನಟಿ ತ್ರಿಶಾ ವಿರುದ್ಧ ಮಾನನಷ್ಟ ಮೊಕದ್ದಮೆ; ನಟ ಮನ್ಸೂರ್​ಗೆ ​ ಛೀಮಾರಿ ಹಾಕಿದ ಕೋರ್ಟ್

    ಚೆನ್ನೈ: ಕಳೆದ ಕೆಲ ದಿನಗಳ ಹಿಂದೆ ನಟಿ ತ್ರಿಶಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದ ನಟ ಮನ್ಸೂರ್ ಅಲಿ ಖಾನ್​ಗೆ ಮದ್ರಾಸ್​ ಹೈಕೋರ್ಟ್​ ಛೀಮಾರಿ ಹಾಕಿದ್ದು, ಒಬ್ಬ ನಟ ಬಹಿರಂಗವಾಗಿ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಮೊದಲು ಅರಿತಿರಬೇಕು ಎಂದು ಕಿವಿಮಾತು ಹೇಳಿದೆ.

    ನಟ ಮನ್ಸೂರ್​ ಅಲಿ ಖಾನ್ ಹೇಳಿಕೆಯನ್ನು ಖಂಡಿಸಿ ನಟಿ ತ್ರಿಶಾ ಬಹಿರಂಗವಾಗಿ ಖಂಡಿಸಿದ್ದರು ಇದಕ್ಕೆ ನಟ ಚರಂಜೀವಿ, ಖುಷ್ಬೂ ಸೇರಿದಂತೆ ಅನೇಕರು ಬೆಂಬಲಿಸಿದ್ದರು.​ ಬಳಿಕ ನಟ ಚಿರಂಜೀವಿ, ತ್ರಿಶಾ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಖುಷ್ಬೂ ಸುಂದರ್​ ವಿರುದ್ಧ ಮದ್ರಾಸ್​ ಹೈಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

    ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಸತೀಶ್ ಕುಮಾರ್ ಅವರಿದ್ದ ಏಕದಸದ್ಯ ಪೀಠವು, ಈ ಪ್ರಕರಣದಲ್ಲಿ ನಟಿ ತ್ರಿಷಾ ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು, ಮನ್ಸೂರ್ ಅಲಿ ಖಾನ್ ಆ ರೀತಿಯ ಕೀಳು ಮಟ್ಟದ ಮಾತುಗಳನ್ನು ನಟಿಯ ವಿರುದ್ಧ ಆಡಿದ್ದಾರೆ. ಒಬ್ಬ ನಟ, ಬಹಿರಂಗವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರಿತಿರಬೇಕು, ಸಾವಿರಾರು ಜನ ಆತನನ್ನು ನೋಡುತ್ತಿರುತ್ತಾರೆ ಹೀಗಿರುವಾಗ ಹೆಚ್ಚಿನ ಜವಾಬ್ದಾರಿ ಆತನ ಮೇಲಿರುತ್ತದೆ ಎಂದು ಹೇಳಿ ಪ್ರಕರಣವನ್ನು ವಜಾ ಮಾಡಿದ್ದಾರೆ.

    ನಟಿ ತ್ರಿಶಾ ವಿರುದ್ಧ ಮಾನನಷ್ಟ ಮೊಕದ್ದಮೆ; ನಟ ಮನ್ಸೂರ್​ಗೆ ​ ಛೀಮಾರಿ ಹಾಕಿದ ಕೋರ್ಟ್

    ಇದನ್ನೂ ಓದಿ: ಸೇನಾ ನೆಲೆಯನ್ನು ಗುರಿಯಾಗಿಸಿ ಆತ್ಮಾಹುತಿ ಬಾಂಬ್​ ದಾಳಿ; 24 ಮಂದಿ ಮೃತ್ಯು

    ಪ್ರಕರಣದ ಹಿನ್ನಲೆ

    ತ್ರಿಷಾ ಜೊತೆ ನಟಿಸುತ್ತೇನೆ ಎಂದಾಗ ಬೆಡ್​ರೂಂ ದೃಶ್ಯ ಇರಬಹುದು ಎಂದು ನಾನು ಭಾವಿಸಿದ್ದೆ. ಈ ಮೊದಲ ಸಿನಿಮಾಗಳಲ್ಲಿ ನಟಿಯರನ್ನು ಬೆಡ್​ರೂಂಗೆ ಕರೆದುಕೊಂಡು ಹೋಗುವ ದೃಶ್ಯ ಇತ್ತು. ಈ ಸಿನಿಮಾದಲ್ಲೂ ಹಾಗೆಯೇ ಇರಬಹುದು ಎಂದುಕೊಂಡಿದ್ದೆ. ನಾನು ಹಲವು ರೇಪ್ ದೃಶ್ಯಗಳನ್ನು ಮಾಡಿದ್ದೇನೆ. ಅದು ನನಗೆ ಹೊಸದಲ್ಲ. ಆದರೆ, ಈ ಚಿತ್ರದಲ್ಲಿ ಅವರನ್ನು ನೋಡಲೂ ಅವಕಾಶ ಕೊಡಲಿಲ್ಲ ಎಂದಿದ್ದರು ಮತ್ತು ಸಾಕಾಷ್ಟು ಖಂಡನೆ ವ್ಯಕ್ತವಾಗಿತ್ತು.

    ಬಳಿಕ ಮಹಿಳೆಯರ ಪಾತ್ರ ಸಮಾಜದಲ್ಲಿ ಪ್ರಮುಖವಾಗಿದ್ದು, ಇದು ಶ್ಳಾಘನೀಯ ವಿಚಾರವಾಗಿದೆ. ನಾನು ತ್ರಿಶಾ ಅವರ ಮದುವೆಯಲ್ಲಿ ಮುಂದೆ ನಿಂತು ಆರ್ಶೀವದಿಸುವ ಅವಕಾಶ ಕೊಡುವಂತೆ ಆ ದೇವರಲ್ಲಿ ಕೇಳಿಕೊಂಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿದ್ದರು. ಆದರೆ, ಕ್ಷಮೆಯಾಚಿಸಿದ ಕೆಲ ದಿನಗಳ ಬಳಿಕ ನಟ ಮನ್ಸೂರ್​ ಅಲಿ ಖಾನ್​ ಉಲ್ಟಾ ಹೊಡೆದಿ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts