More

    ರಾಜಸ್ಥಾನದ ನೂತನ ಸಿಎಂ ಆಗಿ ಶಾಸಕ ಭಜನ್​ಲಾಲ್ ಶರ್ಮಾ​ ಆಯ್ಕೆ

    ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಶಾಸಕ ಭಜನ್​ಲಾಲ್ ಶರ್ಮಾ​ ಆಯ್ಕೆಯಾಗಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಸ್ಪೀಕರ್​ ಆಗಿ ಶಾಸಕ ವಾಸುದೇವ್​ ದೇವ್ನಾನಿ ಅವರನ್ನು ನೇಮಿಸಲಾಗಿದೆ.

    ಮಾಜಿ ಸಿಎಂ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್​ ಶೇಖಾವತ್​, ಅಶ್ವಿನಿ ವೃಷ್ಣವ್, ಸಂಸದರಾದ ಬಾಬಾ ಬಾಲಕನಾಥ್​, ದಿಯಾ ಕುಮಾರಿ ಸೇರಿದಂತೆ ಅನೇಕ ಹಿರಿಯ ನಾಯಕರನ್ನು ಹಿಂದಿಕ್ಕಿ ಮೊದಲ ಬಾರಿ ಶಾಸಕರಾಗಿರುವ 56 ವರ್ಷದ ಭಜನ್​ಲಾಲ್​ ಶರ್ಮಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

    ಜೈಪುರದ ಖಾಸಗಿ ಹೋಟೆಲ್​ ಒಂದರಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ವೀಕ್ಷಕರಾದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರು ಶಾಸಕಾಂಗ ಪಕ್ಷದ ಸಭೆ ಮುಕ್ತಾಯಗೊಂಡ ನಂತರ ಭಜನ್​ಲಾಲ್​ ಶರ್ಮಾ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.

    200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್​ 69 ಸ್ಥಾನಗಳಲ್ಲಿ ಜಯಿಸಿದೆ. ಕಾಂಗ್ರೆಸ್​ ಅಭ್ಯರ್ಥಿಯ ನಿಧನದಿಂದಾಗಿ ಕರಣ್​ಪುರದ ಕ್ಷೇತ್ರದ ಮತದಾನವನ್ನು ಜನವರಿ 05ಕ್ಕೆ ಮುಂದೂಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts